ಅಣ್ಣಿಗೇರಿ : ಸದಾ ಒಂದಿಲ್ಲೊಂದು ಕಾರ್ಯದ ಮೂಲಕ ದೇಶಪಾಂಡೆ ಫೌಂಡೇಶನ್ ರೈತರಿಗೆ ಕೃಷಿಹೊಂಡದಂತ ಮಹತ್ತರ ಕೊಡುಗೆ ನೀಡಿದೆ, ಆ ಕೊಡುಗೆ ಮೂಲಕ ಇಲ್ಲೋಬ್ಬ ರೈತ ತನ್ನ ಎಂಟು ಎಕರೆ ಭೂಮಿಯಲ್ಲಿ ನೀರಾವರಿ ಆಶ್ರಿತ ಬೆಳೆ ಬೆಳೆದು ವಾರ್ಷಿಕ 5.50 ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ.
ಹೌದು ! ಅಣ್ಣಿಗೇರಿ ತಾಲೂಕಿನ ಬಸಾಪೂರ ಗ್ರಾಮದ ರೈತ ಹಣುಮಂತಪ್ಪ ಚವಡಿ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ ತಮ್ಮ ಎಂಟು ಎಕರೆ ಭೂಮಿಗೆ ಒಳಪಟ್ಟಂತೆ 100/100 ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡು ಮುಂಗಾರು ಹೆಸರು, ಮೆಣಸಿನಕಾಯಿ, ಹತ್ತಿ, ಶೇಂಗಾ ಬೆಳೆಗಳ ಲಾಭ ಪಡೆದು ಹಿಂಗಾರು ಕಡಲೆ, ಗೋಧಿ, ಕುಸುಬೆ, ಜೋಳದ ಬೆಳೆಗಳ ಆದಾಯದ ನೀರಿಕ್ಷೆಯಲ್ಲಿದ್ದಾರೆ.
ರೈತರಿಗೆ ದೇಶಪಾಂಡೆ ಫೌಂಡೇಶನ್ ನೀಡಿದ ಕೊಡುಗೆ ಬಗ್ಗೆ ಪೌಂಡೇಶನ್ ಸಿಬ್ಬಂದಿ ವಿರೇಶ್ ರೈತರ ಚಿಟ್ ಚಾಟ್ ಇಲ್ಲಿದೆ ನೋಡಿ.
ರೈತ ಹಣುಮಂತಪ್ಪ ಚವಡಿ ವಿಶೇಷವಾಗಿ ಕೃಷಿಹೊಂಡ ಆಶ್ರಿತ ತೋಟಪಟ್ಟಿ ಸಹ ನಿರ್ಮಾಣ ಮಾಡಿಕೊಂಡು ತರಕಾರಿ ಬೆಳೆ ಬೆಳೆದು ಉತ್ತಮ ಲಾಭ ಕಂಡುಕೊಂಡು, ದೇಶಪಾಂಡೆ ಫೌಂಡೇಶನ್ ಇನ್ನೂ ಹೆಚ್ಚಿನ ಸೌಲಭ್ಯ ಹಾಗೂ ಯೋಜನೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವಂತೆ ಕೋರುತ್ತಾ ಇನ್ನೊಂದು ಕೃಷಿಹೊಂಡ ನಿರ್ಮಿಸಿಕೊಳ್ಳುವ ಸಂತೋಷ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
26/02/2022 09:37 pm