ಅಣ್ಣಿಗೇರಿ : ಈ ಹಿಂಗಾರು ಹಂಗಾಮಿನಲ್ಲಿ ರೈತರು ಜಮೀನಿನಲ್ಲಿ ಹಸಿರ ಬೆಳೆ, ಒಣ ಭೂಮಿಯಲ್ಲೂ ನೀರಾವರಿಯ ಹೊಸ ಪ್ರಯೋಗ ಕಂಡ ಸಂದಕಾ ಗೋಧಿ, ನೀರಾವರಿ ಶೇಂಗಾ ಪೈರಿನ ಸೊಬಗು ಆ ಮೂಲಕ ಕೃಷಿಹೊಂಡ ಆಶ್ರಿತವಾಗಿ ಖುಷಿ ಕಂಡುಕೊಂಡವರೇ ರೈತ ನಜೀರಸಾಬ್ ಭಾವಾಜಿ.
ಅಣ್ಣಿಗೇರಿ ತಾಲೂಕಿನ ಬಸಾಪೂರ ಗ್ರಾಮದಲ್ಲಿ ಹಸಿರಕ್ರಾಂತಿಗೆ ಕಾರಣವಾದದ್ದೇ, ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ನಿರ್ಮಾಣ ಯೋಜನೆ, ಈ ಯೋಜನೆ ಮೂಲಕ ರೈತ ನಜೀರಸಾಬ್ ಭಾವಾಜಿ ತಮ್ಮ ಹತ್ತು ಎಕರೆ ಜಮೀನಿನಲ್ಲಿ ಉತ್ಸಾಹದಿಂದ ವಿಧ ವಿಧದ ಬೆಳೆ ಬೆಳೆದು ಲಾಭದ ನಿರೀಕ್ಷೆಯಲ್ಲಿದ್ದಾರೆ.
ಮುಂಗಾರು ಮೆಣಸಿನಕಾಯಿ, ಗೋವಿನಜೋಳ, ಈರುಳ್ಳಿ, ಶೇಂಗಾ, ಹೆಸರು ಬೆಳೆದು ಇದೀಗ ಹಿಂಗಾರು ಗೋಧಿ, ಜೋಳ, ಕುಸುಬೆ ಬೆಳೆದು ವಾರ್ಷಿಕ 4 ಲಕ್ಷ ಆದಾಯದ ಕನಸಿಗೆ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ರೆಕ್ಕೆ ಕಟ್ಟಿದೆ.
ಕೃಷಿಹೊಂಡ ಕೇವಲ ಬೆಳೆಗೆ ಪೂರಕವಾಗಿರದೇ, ಹೆಚ್ಚುತ್ತಿರುವ ಮಣ್ಣಿನ ಸವಕಳಿ ತಡೆಯಲು, ಬದು ನಿರ್ಮಾಣ ಮಾಡಲು, ನೀರಿನ ಹರಿವಿಗೆ ತಡೆಯೊಡ್ಡಲು ಅನುಕೂಲವಾಗಿ ಮಣ್ಣಿನ ಫಲವತ್ತತೆ ಹೆಚ್ಚಿಸಲು ಅತಿ ಉಪಯುಕ್ತ ಎನ್ನುವುದು ರೈತರ ಅಭಿಪ್ರಾಯ.
ಒಟ್ಟಿನಲ್ಲಿ ರೈತ ನಜೀರ್'ಸಾಬ್ ಭಾವಾಜಿ ತಮ್ಮ 10 ಎಕರೆ ಜಮೀನಿನಲ್ಲಿ ಎಂಟು ತರಹದ ಬೆಳೆ ಬೆಳೆದು ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲೆಂದು ವಾರ್ಷಿಕ 4 ಲಕ್ಷಕ್ಕೂ ಅಧಿಕ ಆದಾಯ ಕನಸು ಸಾಕಾರ ಮಾಡಿಕೊಂಡು ರೈತಾಪಿ ಕಾಯಕದಲ್ಲಿ ಸೈ ಎನಿಸಿಕೊಂಡಿದ್ದಾರೆ.
Kshetra Samachara
19/02/2022 10:58 pm