ಹುಬ್ಬಳ್ಳಿ: ಆ ಜಿಲ್ಲೆಯ ರೈತರೆಲ್ಲ ಪ್ರತಿಬಾರಿಯಂತೆ ಈ ಬಾರಿಯೂ ಕಡಲೆ ಬೆಳೆ ಬೆಳೆದಿದ್ದಾರೆ. ಅತಿವೃಷ್ಠಿ ಅನಾವೃಷ್ಠಿ ನಡುವೆ ಸಾಲ ಶೂಲ ಮಾಡಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಕಡಲೆ ಬೆಳೆ ಖರೀದಿಗಾಗಿ ಖರೀದಿ ಕೇಂದ್ರ ಅಷ್ಟೇ ಅಲ್ಲದೆ ಬೆಂಬಲ ಬೆಲೆ ಸಿಗದೇ ಆ ರೈತ ವರ್ಗ ಕಂಗಾಲಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬೆಳೆ ಬೆಳೆದಿದ್ದಾರೆ. ಆದರೆ ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದಿಂದ ಕಡಲೆ ಖರೀದಿ ಕೇಂದ್ರ ಆರಂಭಿಸಿಲ್ಲ. ಅಷ್ಟೇ ಅಲ್ಲದೇ ರೈತರು ಬೆಳೆದ ಕಡಲೆ ಬೆಳೆಗೂ ಇದುವರೆಗೂ ಸರ್ಕಾರದಿಂದ ಬೆಂಬಲ ಬೆಲೆ ನಿಗದಿಪಡಿಸಿಲ್ಲ.
ಪ್ರಮುಖವಾಗಿ ಕಳೆದ ವರ್ಷ ರೈತರ ಕೂಗಿಗೆ ಕಿವಿಕೊಟ್ಟ ಸರ್ಕಾರ, 5,100 ರೂ ಬೆಂಬಲ ಬೆಲೆ ನಿಗದಿಪಡಿಸಿ, ಪ್ರತಿಯೊಬ್ಬ ರೈತರಿಂದ 15 ಕ್ವಿಂಟಾಲ್ ಕಡಲೆ ಖರೀದಿಸುವುದಾಗಿ ಘೋಷಣೆ ಮಾಡಲಾಗಿತ್ತು. ಆದರೆ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ರೈತರಿಗೆ ಈ ಬೆಲೆ ತೆಗೆದುಕೊಂಡ ಸಾಲವನ್ನೂ ತೀರಿಸಲು ಸಾಧ್ಯವಾಗಿರಲಿಲ್ಲ.
ಒಟ್ಟಾರೆ ಸರ್ಕಾರ ಹಾಗೂ ಸರ್ಕಾರದ ಜನಪ್ರತಿನಿಧಿಗಳು ಶೀಘ್ರವೇ ಖರೀದಿ ಕೇಂದ್ರಗಳನ್ನು ತೆಗೆಯಬೇಕಿದೆ. ಈ ಮೂಲಕ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನಿಗದಿಪಡಿಸಿ ರೈತರ ಕಣ್ಣೊರೆಸುವ ಕೆಲಸ ಮಾಡಬೇಕಿದೆ.
Kshetra Samachara
12/02/2022 04:04 pm