ಕಲಘಟಗಿ: ಸಮಗ್ರ ಕೃಷಿಯಿಂದ ಮಾತ್ರ ರೈತರಿಗೆ ಆರ್ಥಿಕ ಸಬಲತೆ ಸಾಧ್ಯ ಎಂದು ಕೆಎಂಎಫ್ ಧಾರವಾಡ ಘಟಕದ ನಿರ್ದೇಶಕಿ ಗೀತಾ ಮರಲಿಂಗಣ್ಣವರ ಹೇಳಿದ್ದಾರೆ.
ಕಲಘಟಗಿ ಹೊರವಲಯದ 12 ಮಠದಲ್ಲಿ ಆಯೋಜಿಸಿದ್ದ ಹಾಲು ಉತ್ಪಾದಕರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, 'ರೈತರು ಇಂದಿನ ದಿನಮಾನಗಳಲ್ಲಿ ಹೆಚ್ಚಾಗಿ ಕೃಷಿಯನ್ನು ಅವಲಂಬಿಸಿ ಆರ್ಥಿಕ ಏರಿಳಿತವನ್ನು ಕಂಡಾಗ ಹೈನುಗಾರಿಕೆಯಿಂದ ಆರ್ಥಿಕ ಸಬಲತೆ ಸಾಧ್ಯವಾಗುತ್ತದೆ. ಕುಟುಂಬ ನಿರ್ವಹಣೆ ಕೂಡ ಸಾಧ್ಯವಾಗುತ್ತದೆ. ಒಕ್ಕೂಟದಿಂದ ಕಲ್ಯಾಣ ಸಂಘದ ಸದಸ್ಯರಿಗೆ ಉಚಿತವಾಗಿ ವೈದ್ಯಕೀಯ ಚಿಕಿತ್ಸೆ ಹಾಗೂ ಶಿಕ್ಷಣಕ್ಕಾಗಿ ಸಹಾಯ, ಶವ ಸಂಸ್ಕಾರಕ್ಕಾಗಿ ಹಣ ಸಹಾಯವನ್ನು ಸಂಸ್ಥೆಯಿಂದ ಮಾಡಲಾಗುತ್ತಿದೆ. ಎಲ್ಲ ಸದಸ್ಯರು ಹೆಚ್ಚು ಹಾಲು ಉತ್ಪಾದನೆ ಮಾಡಿ ಸಂಸ್ಥೆಯ ಪ್ರಯೋಜನ ಪಡೆಯಬೇಕು' ಎಂದು ತಿಳಿಸಿದ್ದಾರೆ.
ಅಲ್ಲದೇ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ್ ಮೊಗದ ಮಾತನಾಡಿ, ರೈತರ ಅಭಿವೃದ್ಧಿಗಾಗಿ ಅವರ ಮಕ್ಕಳ ಶಿಕ್ಷಣಕ್ಕಾಗಿ ವಿದ್ಯಾರ್ಥಿ ವಸತಿ ನಿಲಯ, ಕಲ್ಯಾಣ ಮಂಟಪ ನಿರ್ಮಾಣವನ್ನು ಸರ್ಕಾರದ ಸಹಯೋಗದಲ್ಲಿ ಮಾಡಲಾಗುತ್ತಿದೆ. ಸಭೆಯಲ್ಲಿ ಸಂಘದ ಸದಸ್ಯರು ಸಮಸ್ಯೆಗಳಿಗೆ ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚಿಸಿ ಕೂಡಲೇ ಪರಿಹಾರ ನೀಡಲಾಗುವುದು' ಎಂದರು
ಇದೇ ವೇಳೆ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಉತ್ತಮ ಸಾಧನೆ ತೋರಿದಕ್ಕಾಗಿ ಸಂಘದ ಸದಸ್ಯರ ಮಕ್ಕಳಿಗೆ 10,000 ರೂ. ಚೆಕ್‌ಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಡಾಕ್ಟರ್ ಕೆ.ಎಂ ಲೋಹಿತೇಶ್ವರ, ಎಂಬಿ ವಡ್ಡಟ್ಟಿ, ಎಂಎಂ ಹಿರೇಗೌಡರ್, ಸೋಮಶೇಖರ್ ಪಾಟೀಲ್ ಹಾಗೂ ಸಂಘದ ಸದಸ್ಯರು ಇದ್ದರು.
Kshetra Samachara
22/01/2022 07:00 pm