ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕೃಷಿಗೆ ಚಟುವಟಿಕೆಗೆ ಭಾರತೀಯ ರೈಲ್ವೆ ಉತ್ತೇಜನ: ಭತ್ತದ ಕೊಯ್ಲು ಯಂತ್ರದ ರವಾನೆ...!

ಹುಬ್ಬಳ್ಳಿ: ಒಂದಿಲ್ಲೊಂದು ರೀತಿಯಲ್ಲಿ ಸಾರ್ವಜನಿಕರಿಗೆ ಉತ್ತಮ ಸಾರಿಗೆ ಹಾಗೂ ಸರಕು ಸಾಗಾಣಿಕೆಯ ಸೇವೆಯನ್ನು ನೀಡುತ್ತಿರುವ ರೈಲ್ವೆ ಇಲಾಖೆ ಈಗ ಕೃಷಿ ಉತ್ತೇಜನಕ್ಕೆ ಸಾಕ್ಷಿಯಾಗಿದೆ.

ಗಂಗಾವತಿಯ ರೈಲು ನಿಲ್ದಾಣದಲ್ಲಿ ನೂರಾರು ಭತ್ತ ಕೊಯ್ಲು ಯಂತ್ರಗಳನ್ನು ಸಾಲಾಗಿ ನಿಲ್ಲಿಸಿ ರೈಲ್ವೆ ಬೋಗಿಗಳಿಗೆ ಹತ್ತಿಸಲಾಯಿತು. ಗಂಗಾವತಿ ಭಾಗಕ್ಕೆ ರೈಲು ಸೇವೆ ಸಿಕ್ಕ ಬಳಿಕ ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕೊಯ್ಲು ಯಂತ್ರಗಳನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಾಗಿಸಲಾಗುತ್ತಿದೆ..

ಭತ್ತದ ಕಣಜ ಎಂದು ಹೆಸರು ಪಡೆದಿರುವ ಗಂಗಾವತಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ಭತ್ತದ ಕೊಯ್ಲು ಬಹುತೇಕ ಪೂರ್ಣಗೊಂಡಿದೆ. ಇದರಿಂದ ನೂರಾರು ಭತ್ತದ ಕೊಯ್ಲು ಯಂತ್ರಗಳು ಜಿಲ್ಲೆಯಿಂದ ರೈಲು ಮೂಲಕ ತಮಿಳುನಾಡಿಗೆ ವಲಸೆ ಶುರು ಮಾಡಿವೆ.

ಗಂಗಾವತಿಯ ರೈಲು ನಿಲ್ದಾಣದಲ್ಲಿ ನೂರಾರು ಭತ್ತ ಕೊಯ್ಲು ಯಂತ್ರಗಳನ್ನು ಸಾಲಾಗಿ ನಿಲ್ಲಿಸಿ ರೈಲ್ವೆ ಬೋಗಿಗಳಿಗೆ ಹತ್ತಿಸಲಾಯಿತು. ಗಂಗಾವತಿ ಭಾಗಕ್ಕೆ ರೈಲು ಸೇವೆ ಸಿಕ್ಕ ಬಳಿಕ ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕೊಯ್ಲು ಯಂತ್ರಗಳನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಾಗಿಸಲಾಗುತ್ತಿದೆ. ಈ ಬಗ್ಗೆ ಹುಬ್ಬಳ್ಳಿಯ ಡೆಪ್ಯೂಟಿ ರೈಲ್ವೆ ಮ್ಯಾನೇಜರ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಯಂತ್ರಗಳ ಸಾಗಣೆಯನ್ನು ಉಲ್ಲೇಖಿಸಿದ್ದಾರೆ.

Edited By : Shivu K
Kshetra Samachara

Kshetra Samachara

22/01/2022 08:46 am

Cinque Terre

37.29 K

Cinque Terre

3

ಸಂಬಂಧಿತ ಸುದ್ದಿ