ವಿಶೇಷ ವರದಿ : ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
ಕುಂದಗೋಳ : ಛಲ ಎಂದ್ರೇ ಅದಕ್ಕೆ ಇನ್ನೋಂದು ಪದ ರೈತ ಎಂಬಂತೆ. ಇಲ್ಲೋಬ್ಬ ರೈತ ಅತಿವೃಷ್ಟಿಗೆ ಬಳಲದೆ, ಹೊಲಕ್ಕೆ ದಾರಿ ಇಲ್ಲಾ ಎಂದು ಕೊರಗದೇ ಅಂತರಾಜ್ಯಗಳಲ್ಲಿ ಹೆಚ್ಚಾಗಿ ಬೆಳೆಯುವ ವಾಣಿಜ್ಯ ಬೆಳೆ ಅಜ್ವಾನ್'ವನ್ನು ಕುಂದಗೋಳ ತಾಲೂಕಿನ ಯರಿನಾರಾಯಣಪುರದ ತಮ್ಮ ಹೊಲದಲ್ಲಿ ಬೆಳೆದು ಮಾದರಿಯಾಗಿದ್ದಾರೆ.
ಹೌದು ! ವೆಂಕನಗೌಡ ಉಜ್ಜನಗೌಡ ಕೆಂಚನಗೌಡರ ಎಂಬ ರೈತನೇ ಧಾರಾವಾಡ ಜಿಲ್ಲೆಯಲ್ಲಿ ಪ್ರಥಮ ಪ್ರಯೋಗವಾಗಿ ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಆಂಧ್ರಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುವ ಕರ್ನಾಟಕದಲ್ಲಿ ಅಪರೂಪವಾದ ಓಂ ಕಾಳು ಅಜ್ವಾನ್'ವನ್ನು ತಮ್ಮ ನಾಲ್ಕು ಎಕರೆ ಹೊಲದಲ್ಲಿ "ಗುಜರಾತ್ ಲ್ಯಾಮ್-2" ತಳಿಯ ಅಜ್ವಾನ್'ವನ್ನು ಕೆಜಿಗೆ 300 ರೂಪಾಯಿಯಂತೆ ಕೋರಿಯರ್ ತರಿಸಿ ಬೆಳೆದವರು.
ಎಲ್ಲರಂತೆ ಸಾಮಾನ್ಯ ವರ್ಗದ ಬೆಳೆ ಬೆಳೆಯುತ್ತಿದ್ದ ರೈತ ವೆಂಕನಗೌಡ ಕಳೆದ 2 ವರ್ಷದಿಂದ ಅಜ್ವಾನ್ ಬೆಳೆ ಬೆಳೆಯುವ ಬಗ್ಗೆ ಮಾಹಿತಿ ಪಡೆದು, ಸಾವಯುವ ಮಾರ್ಗ ಅನುಸರಿಸಿ ನಾಲ್ಕು ಕೆಜಿ ಅಜ್ವಾನ್ ಬೆಳೆಯನ್ನು ತಮ್ಮ 4 ಎಕರೆ ಜಮೀನಿನಲ್ಲಿ ಎತ್ತು, ಟ್ರ್ಯಾಕ್ಟರ್ ಬಳಸದೇ ಮನುಷ್ಯರೇ ತಮ್ಮ ಕೈಯಾರೆ ಬೀಜ ಬಿತ್ತಿ ಬೆಳೆ ಬೆಳೆದಿದ್ದಾರೆ.
ಸಧ್ಯ ಸ್ವಚ್ಚಂದವಾಗಿ ಬೆಳೆದ ಅಜ್ವಾನ್ ಬೆಳೆ ಇನ್ನೇರೆಡು ವಾರದಲ್ಲಿ ಕಟಾವಿಗೆ ಬರಲಿದ್ದು, ಕ್ವಿಂಟಾಲ್'ಗೆ "15 ರಿಂದ 20 ಸಾವಿರಕ್ಕೆ ಅಜ್ವಾನ್ ಮಾರಾಟವಾದ್ರೇ, ಹೊಟ್ಟು 2 ರಿಂದ 3 ಸಾವಿರ ರೂಪಾಯಿಗೆ ಮಾರಾಟವಾಗಲಿದೆ.
ಈಗಾಗಲೇ ರೈತ ವೆಂಕನಗೌಡರ ಪ್ರಯೋಗ ಕಂಡು ಅದೆಷ್ಟೋ ರೈತರು ಮಾಹಿತಿ ಪಡೆಯಲು, ಹೊಲಕ್ಕೆ ಆಗಮಿಸುತ್ತಿದ್ರೇ, ಪೋನ್ ಕರೆ ಮಾಡಿ ಮಾಹಿತಿ ಕೇಳುವವರು ಸಂಖ್ಯೆ ಸಹ ಹೆಚ್ಚಿದೆ.
ಇನ್ನೂ ವಿಶೇಷವಾಗಿ ಅಜ್ವಾನ್ ಓಂ ಕಾಳಿನ ಜೊತೆ ಸಾಲು ತಿಳಿಯಲು ಮಡಕೆ ಹಾಗೂ ಬೆಳೆಯ ಅವಧಿ ತಿಳಿಯಲು ಜೋಳ ಮಿಶ್ರ ಮಾಡಿ ಬಿತ್ತನೆ ಮಾಡಿರುವ ರೈತ ವೆಂಕನಗೌಡ ನಿತ್ಯ ಬೆಣ್ಣೆ ಹಳ್ಳ ದಾಟಿಯೆ ಈ ಕೃಷಿ ಕಾಯಕ ಮಾಡಬೇಕು ಇಂತಹ ವ್ಯವಸ್ಥೆಯಲ್ಲಿ ಮುಂದಿನ ವರ್ಷ ಜೀರಿಗೆ ಬೆಳೆಯಲು ಪಣ ತೊಟ್ಟಿದ್ದಾರೆ.
ಒಟ್ಟಾರೆ ಯಾರೇ ರೈತರು ಬಂದರೂ ಉಪಯುಕ್ತ ಮಾಹಿತಿ ನೀಡುತ್ತಾ ಅತಿವೃಷ್ಟಿ ಕಷ್ಟದ ನಡುವೆ ಹೊಸ ಮಾರ್ಗ ಅನುಸರಿಸಿದ ವೆಂಕನಗೌಡ ರನ್ನು ನೀವೂ ಸಂಪರ್ಕ ಮಾಡಲು 9731099252 ಗೆ ಕರೆ ಮಾಡಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/01/2022 03:18 pm