ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಅತಿವೃಷ್ಟಿ ಕಳೆದು ಹೋಯ್ತು, ಹಿಂಗಾರಿಗೆ ಕೀಟಗಳ ಭಾದೆ ಹೆಚ್ಚಾಯ್ತು

ಕುಂದಗೋಳ : ಅಬ್ಬಾ ! ಅತಿವೃಷ್ಟಿ ಕಳೆದು ಹೋಯ್ತು ಹಿಂಗಾರು ಜೋಳ, ಕುಸುಬೆ, ಕಡಲೆ, ಗೋಧಿ ಬೆಳೆಯನ್ನಾದರೂ ಸರಿಯಾಗಿ ಪಡೆದುಕೊಳ್ಳೋಣ ಎನ್ನುವ ರೈತರ ಕೃಷಿ ಬದುಕಿನ ಆಕಾಂಕ್ಷೆಗೆ ಈಗ ಕೀಟಗಳ ಭಾದೆ ಅತಿಯಾಗಿದೆ.

ಕುಂದಗೋಳ ತಾಲೂಕಿನ ರೈತರು ಬೆಳೆಗೀಗ ವಿಪರೀತ ಕೀಡೆಗಳ ಕಾಟ ಅತಿಯಾಗಿದ್ದು, ಜೋಳದ ಬೆಳೆ ತನೆಗಳಿಗಂತೂ ಕ್ರೀಡೆಗಳು ಮುಗಿಬಿದ್ದ ಪರಿಣಾಮ ಜೋಳದ ಬೆಳೆ ಸಂಪೂರ್ಣ ಹಾಳಾಗುವ ಸಂಭವದಲ್ಲಿವೆ, ಇನ್ನೂ ಈ ಕೀಟಗಳ ಭಾದೆ ಹತೋಟಿಗಾಗಿ ರೈತರು ರಾಸಾಯನಿಕ, ಕ್ರಿಮಿನಾಶಕಗಳ ಮೋರೆ ಹೋಗಿ ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಪರದಾಟ ನಡೆಸಿದ್ದಾರೆ.

ರಾಸಾಯುನಿಕ ಸಿಂಪಡಣೆ ಮಾಡಿದ ಪರಿಣಾಮ, ಜಮೀನಿನಲ್ಲಿ ಹುಲ್ಲನ್ನು ಕಿತ್ತು ಇತರೆ ರೈತರು ತಮ್ಮ ಜಾನುವಾರುಗಳಿಗೆ ಹಾಕದಂತೆ ಎಚ್ಚರಿಕೆ ನಾಮಫಲಕ ಅಳವಡಿಸಿದ ರೈತ, ತನ್ನ ಹಿಂಗಾರು ಬೆಳೆ ಪರಿಸ್ಥಿತಿಯನ್ನು ಸ್ವತಃ ತಾನೇ ವಿಡಿಯೋ ಮಾಡಿ ಪಬ್ಲಿಕ್ ನೆಕ್ಸ್ಟ್ ಕಳುಹಿಸಿ ರೈತ ಸಂಪರ್ಕ ಕೇಂದ್ರ ಹಾಗೂ ಕೃಷಿ ಅಧಿಕಾರಿಗಳು ಸಲಹೆ ಕೊಡುವಂತೆ ಕೇಳಿದ್ದಾರೆ.

Edited By : Manjunath H D
Kshetra Samachara

Kshetra Samachara

06/01/2022 01:08 pm

Cinque Terre

114.39 K

Cinque Terre

0

ಸಂಬಂಧಿತ ಸುದ್ದಿ