ಕುಂದಗೋಳ : ತನ್ನ ಗುಣಮಟ್ಟ ಹಾಗೂ ರುಚಿಯ ಮೂಲಕವೇ ರಾಜ್ಯಾದ್ಯಂತ ಪ್ರಸಿದ್ಧಿ ಪಡೆದು ಬ್ಯಾಡಗಿ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿದ್ದ ಕುಂದಗೋಳ ತಾಲೂಕಿನ ರೈತರಕ ಬೆಳೆದ ಮೆಣಸಿನಕಾಯಿ ಬೆಳೆ ಪ್ರಸಕ್ತ ವರ್ಷ ರೈತನಿಗೆ ಬೇಡವಾಗಿದೆ.
ಈಗಾಗಲೇ ಅತಿವೃಷ್ಟಿಗೆ ಸಿಲುಕಿದ ಬೆಳೆಯನ್ನು ರೈತರು ಹೊಲದಿಂದ ಕಿತ್ತು ತಂದು ಮಾರಲು ಮುಂದಾದ್ರೇ. ಆ ಬೆಳೆ ಕೊಂಡು ಕೊಳ್ಳುವವರೇ ಇಲ್ಲಾ, ಇನ್ನೂ ಮೆಣಸಿನಕಾಯಿ ಬೆಳೆ ಸೊಗಸಾಗಿ ಬೆಳೆದಾಗ ಅತಿವೃಷ್ಟಿ ಕಾಡಿದ್ರೆ, ಈಗ ಬೆಳೆ ಬಿಡಿಸುವ ಸಂದರ್ಭದಲ್ಲಿ ಕೀಟಗಳ ಬಾಧೆ ಹೆಚ್ಚಾಗಿ ಮೆಣಸಿನಕಾಯಿ ಬೆಳೆಯನ್ನು ಸ್ವತಃ ಅನ್ನದಾತನೇ ಹೊಲದಲ್ಲಿ ಕೈ ಬಿಟ್ಟು ಬಂದಿದ್ದಾನೆ.
ಈ ಪಾಟಿ ರಾಶಿ ರಾಶಿ ಮೆಣಸಿನಕಾಯಿ ಬೆಳೆ ಕಣದಲ್ಲಿ ಇದ್ದರೂ, ಆ ಮೆಣಸಿನಕಾಯಿ ಬೆಳೆಯ ಹಣ ಆಳು ಹಾಗೂ ನಿರ್ವಹಣೆಗೆ ಸಾಲುತ್ತಿಲ್ಲ, ಇನ್ನೂ ಕೆಲ ರೈತರು ಮನೆಯಲ್ಲಿ ಖಾಲಿ ಕೂರದೇ ತಾವೊಬ್ಬರೇ ಮೆಣಸಿನಕಾಯಿ ಕಾಯಕ ಆರಂಭಿಸಿದ್ರೇ, ಕೆಲ ರೈತರು ಸಂಪೂರ್ಣ ಆಳುಗಳಿಗೆ ಹಣ ಕೊಡಲಾಗದೆ ಮೆಣಸಿನಕಾಯಿ ಬೆಳೆಯನ್ನು ಹೊಲದಿಂದ ಕೀಳುವುದನ್ನೇ ಕೈ ಬಿಟ್ಟಿದ್ದಾರೆ.
ಒಟ್ಟಾರೆ ವಾಣಿಜ್ಯ ಬೆಳೆ ಮೆಣಸಿನಕಾಯಿಯನ್ನು ಹೊಲದಲ್ಲಿ ಕೈ ಬಿಟ್ಟು ನಿರಾಶೆ ಮುಖ ಹೊತ್ತು ಬೆಳೆ ಪರಿಹಾರ ಕಾಣದೆ ಮನೆ ಅನ್ನದಾತ ಸೇರಿದ್ದಾನೆ.
-ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
Kshetra Samachara
26/12/2021 10:10 am