ಕಣದ ತುಂಬ ಜವಾರಿ ಜೋಳ
ಶ್ರಮದಿಂದ ದುಡಿದರ ಇಳುವರಿ ಬಹಳ
ಫಲ ಕೊಟ್ಟ ಭೂಮಿ ಕುಲು ಕುಲು ನಗತಾಳ
ಮನಸಿಟ್ಟು ದುಡಿಯದಿದ್ರ ತಪ್ಪತೈತಿ ಬದುಕಿನ ತಾಳ
ಒಣ ಭೂಮಿ ಇರಲಿ. ನೀರಾವರಿ ಇರಲಿ. ಎರೆ ನೆಲವಿರಲಿ. ಮಸಾರಿ ಇರಲಿ. ನಮ್ಮ ದುಡಿಮೆ ಮಾತ್ರ ಯಾವ ಕಾರಣಕ್ಕೂ, ಯಾವ ಕಾಲಕ್ಕೂ ನಿಲ್ಲಕೂಡದು. ಕುಳಿತು ಉಂಡರೆ ಕುಡಿಕೆ ಹೊನ್ನು ಕೂಡ ಸಾಲದು ಎಂಬಂತೆ ನಾವು ಸದಾ ದುಡಿಯುತ್ತಿರಬೇಕು.
ಹೀಗೆ ಅವಿರತವಾಗಿ ಶ್ರಮಿಸುತ್ತಿರುವ ರೈತ ಮಹಿಳೆಯೊಬ್ಬರ ಬಗ್ಗೆ ಇವತ್ತಿನ ದೇಶ್ ಕೃಷಿ ಸಂಚಿಕೆಯಲ್ಲಿ ತಿಳಿಯೋಣ. ಇವರು ನವಲಗುಂದ ತಾಲೂಕು ನಾವಳ್ಳಿ ಗ್ರಾಮದ ಅನ್ನದಾತೆ ಅನಸೂಯಾ ನರಗುಂದ. ಅವರ ನಿತ್ಯದ ದಿನಚರಿ ಬಗ್ಗೆ ಅವರು ಪಬ್ಲಿಕ್ ನೆಕ್ಸ್ಟ್ ಜೊತೆ ಮಾತಾಡಿದ್ದಾರೆ. ಬನ್ನಿ ಶ್ರಮ ಸಾಧಕಿಯ ಮನದ ಮಾತು ಕೇಳೋಣ ನೋಡೋಣ..
Kshetra Samachara
22/12/2021 12:51 pm