ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಹೊಲದಾಗ ದುಡಿತಾರ ಉಮಾ ಮಣಕವಾಡ: ಇವರಿಗೆ ಮಣ್ಣಿನ ಮ್ಯಾಲ ಬಾಳ ಮಮಕಾರ

ಮುತ್ತಿನಂತ ಜೋಡೆತ್ತು

ಹದ ಮಾಡ್ಯಾವ ಹೊಲವೆಲ್ಲ

ಸಾಲು ಹಿಡಿದು ಬಂಗಾರ ಬಿತ್ತ್ಯಾವ

ಸಾಲು ಹಿಡಿದು ಬಂಗಾರ ಬಿತ್ತ್ಯಾವ ನನ್ನವ್ವ

ಬಂಗಾರದಂತ ಕಾಳು ಮನಿಗೆ ತಂದಾವ

ನಮ್ಮ ಕೃಷಿ ಪರಂಪರೆಯೇ ಹಾಗೆ. ಅದು ನೆಲದ ಸೊಗಡಿನೊಂದಿಗೆ ಹಾಸುಹೊಕ್ಕಾಗಿರುತ್ತದೆ. ಬೇಸಾಯದ ದುಡಿಮೆಯಲ್ಲಿ ಪುರುಷನ ಪಾಲು ಎಷ್ಟಿದೆಯೋ ಅಷ್ಟೇ ಪಾಲು ಮಹಿಳೆಯರದೂ ಇದೆ. ಇವತ್ತಿನ ನಮ್ಮ ದೇಶ್ ಕೃಷಿ ಸಂಚಿಕೆಯಲ್ಲಿ ಸ್ವಾಭಿಮಾನಿ ರೈತ ಮಹಿಳೆ ಉಮಾ ಮಣಕವಾಡ ಅವರ ಬಗ್ಗೆ ತಿಳಿಯೋಣ. ಪತಿ ಸರ್ಕಾರಿ ಹುದ್ದೆಯಲ್ಲಿದ್ದರೂ ಅವರು ತಮ್ಮ ಮೂಲ ಉದ್ಯೋಗ ಕೃಷಿಯನ್ನ ಬಿಟ್ಟೇ ಇಲ್ಲ. ಶಿಕ್ಷಕರಾಗಿರುವ ಪತಿ ಅಲ್ಪಾವಧಿಯಲ್ಲಿ ಕೃಷಿ ಮಾಡ್ತಾರೆ. ಹೀಗಾಗಿ ಪತ್ನಿ ಉಮಾ ಮಣಕವಾಡ ಅವರು ಪತಿಯ ಪ್ರತಿ ಕಾಯಕದಲ್ಲೂ ಸಮರ್ಥ ಸಾಥ್ ಕೊಡುತ್ತಾರೆ. ಅವರು ನಿಮ್ಮ ಪ್ರೀತಿಯ ಪಬ್ಲಿಕ್ ನೆಕ್ಸ್ಟ್ ಜತೆ ಪ್ರೀತಿಯಿಂದ ಮಾತಾಡಿದ್ದಾರೆ. ಬನ್ನಿ ಅವರ ಮಾತುಗಳನ್ನು ಕೇಳೋಣ, ನೋಡೋಣ, ತಿಳಿಯೋಣ.

Edited By : Nagesh Gaonkar
Kshetra Samachara

Kshetra Samachara

17/12/2021 06:47 pm

Cinque Terre

60.21 K

Cinque Terre

4

ಸಂಬಂಧಿತ ಸುದ್ದಿ