ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಕಾಲಿಕ ಮಳೆ: ವಿಮಾ ಪರಿಹಾರ ಪಡೆಯಲು ಅವಕಾಶ

ಧಾರವಾಡ: ಪ್ರಸಕ್ತ 2021ರ ಹಿಂಗಾರು ಹಂಗಾಮಿನಲ್ಲಿ ಬಿತ್ತಿದ ಬೆಳೆಗಳು ಪ್ರಕೃತಿ ವಿಕೋಪಗಳು, ಸ್ಥಳೀಯ ಗಂಡಾಂತರಗಳಿಂದ ಹಾನಿಯಾದರೆ ಬೆಳೆ ವಿಮೆ ಮಾಡಿಸಿರುವ ರೈತರು ಈ ಕುರಿತು ನೇರವಾಗಿ ಸಂಬಂಧಪಟ್ಟ ವಿಮಾ ಸಂಸ್ಥೆಗಳ ಕಚೇರಿಗಳಿಗೆ, ಹಣಕಾಸು ಸಂಸ್ಥೆ ( ಬ್ಯಾಂಕ್),ಕೃಷಿ ಅಥವಾ ತೋಟಗಾರಿಕೆ ಇಲಾಖೆಗಳ ಮೂಲಕ ತಕ್ಷಣ ಮಾಹಿತಿ ನೀಡಬೇಕು. ವಿಮೆ ಮಾಡಿಸಿದ ಬೆಳೆಯ ವಿವರಗಳು, ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣಗಳನ್ನು 72 ಗಂಟೆಗಳೊಳಗಾಗಿ ತಿಳಿಸಬೇಕು.

2021 ಹಿಂಗಾರು ಅವಧಿಯಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ( ವಿಮಾ ) ಯೋಜನೆಯಡಿ ನೋಂದಾಯಿಸಿಕೊಂಡು ಬೆಳೆ ಹಾನಿಗೆ ಒಳಗಾದ ರೈತರು 72 ಗಂಟೆಗಳೊಳಗಾಗಿ ವಿಮಾ ಸಂಸ್ಥೆಗೆ ಮಾಹಿತಿ ಒದಗಿಸಿ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

02/12/2021 09:55 pm

Cinque Terre

9.53 K

Cinque Terre

0

ಸಂಬಂಧಿತ ಸುದ್ದಿ