ನವಲಗುಂದ: ತಾಲೂಕಿನಾದ್ಯಂತ ರೈತರ ಸಂಕಷ್ಟ ಹೇಳ ತೀರದ್ದಾಗಿದೆ. ಕಷ್ಟ ಪಟ್ಟು ಬೆಳೆದ ಬೆಳೆ ಈಗ ಕೈಗೆ ಬರದೆ, ರೈತ ಕಣ್ಣೀರು ಹಾಕುವ ಪರಿಸ್ಥಿತಿ ಬಂದೋದಗಿದ್ದು, ಈಗ ರೈತರು ಪರಿಹಾರಕ್ಕಾಗಿ ಎದುರು ನೋಡುವಂತಾಗಿದೆ.
ನವಲಗುಂದ ತಾಲ್ಲೂಕಿನ ಯಮನೂರ ಗ್ರಾಮದ ಮಂಜುನಾಥ್ ಸಾರಾವರಿ, ರಾಘವೇಂದ್ರ ಕಳ್ಳಿ, ಸಿದ್ದಪ್ಪ ಸುರೇಬಾನ, ಶಿವಾನಂದ ಸಂಜೀವನ್ನವರ್, ಶಾಂತಮ್ಮ ಪೂಜಾರ್ ಸೇರಿದಂತೆ ಹಲವು ರೈತರು ಬೆಳೆದ ಗೋವಿನ ಜೋಳವನ್ನು ರಾಶಿ ಮಾಡಲಾಗಿತ್ತು. ಕಳೆದ ಹಲವು ದಿನಗಳಿಂದ ಸುರಿದ ಮಳೆಗೆ ಸಿಲುಕಿ ಈಗ ಗೋವಿನ ಜೋಳ ಸಂಪೂರ್ಣ ಮೊಳಕೆ ಹೊಡೆದು ಬೆಳೆ ಸಂಪೂರ್ಣ ನಾಶವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ ರೈತರು ಪರಿಹಾರಕ್ಕಾಗಿ ಆಗ್ರಹಿಸುತ್ತಿದ್ದಾರೆ.
Kshetra Samachara
27/11/2021 08:45 pm