ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅರ್ಜಿ ಸಲ್ಲಿಕೆಗೆ ಕಡಿಮೆ ಅವಕಾಶ : ವಿಮೆ ಕಂಪನಿಗಳ ಮರ್ಜಿಯಲ್ಲಿ ಅನ್ನದಾತ

ಹುಬ್ಬಳ್ಳಿ: ಅಕಾಲಿಕ ಮಳೆಯಿಂದ ಅನ್ನದಾತನ‌ ಬದುಕು ಅಯೋಮಯವಾಗಿದೆ. ಇಂತಹ ಸಮಯದಲ್ಲಿಯೇ ರೈತರ ಜೊತೆ ಬೆಳೆ ವಿಮೆ ಕಂಪನಿಯ ಚೆಲ್ಲಾಟ ಆಡುತ್ತಿದ್ದು, ಬೆಳಹಾನಿಯಾದ 72 ಗಂಟೆಯೊಳಗೆ ಅರ್ಜಿ ಕೊಡಲು ಹೇಳಿ ರೈತನ ಸಮಸ್ಯೆ ಜೊತೆಗೆ ಚೆಲ್ಲಾಟ ಆಡುತ್ತಿವೆ.

ಹೌದು.. ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿ ನೀಡುವಂತೆ ತಿಳಿಸಿದ ಬೆಳೆ ವಿಮೆ ಕಂಪನಿಗಳು ಕಡಿಮೆ ಅವಧಿಯಲ್ಲಿಯೇ ಅರ್ಜಿ ಸ್ವೀಕಾರಕ್ಕೆ ಮುಂದಾಗಿವೆ. ಆದರೆ ಈ ವಿಷಯ ಅದೆಷ್ಟೋ ರೈತರಿಗೆ ಗೋತ್ತೆ ಇಲ್ಲ. ಈಗ ಬೆಳೆ ವಿಮೆ ಕಂಪನಿ ನೀಡಿದ ಕಾಲಾವಧಿ ಮುಕ್ತಾಯವಾಗಿದ್ದು, ಇದರಿಂದ ಬಹಳಷ್ಟು ರೈತರಿಗೆ ಪರಿಹಾರ ಸಿಗುವುದೇ ಡೌಟ್ ಆಗಿದೆ.

ದೇಶದ ಬೆನ್ನೆಲುಬು ರೈತನಿಗೆ ಈ ರೀತಿ ಅನ್ಯಾಯ ಆಗುತ್ತಿದೆ. ಆದರೂ ರೈತ ಸಂಪರ್ಕಗಳ ಮುಂದೆ ಅರ್ಜಿ ನೀಡಲು ಅನ್ನದಾತ ಕ್ಯೂ ನಿಂತಿದ್ದಾನೆ. ಒಂದು ಕಡೆ ನೀಡಿದ ಕಾಲಾವಕಾಶ ಮುಕ್ತಾಯ, ಇನ್ನೊಂದು ‌ಕಡೆ ಎಲ್ಲಿ ಪರಿಹಾರ ನಮಗೆ ಕೈ ತಪ್ಪುತ್ತೆ ಎನ್ನುವ ಭಯ. ಇದೇ ಕಾರಣಕ್ಕೆ ರೈತರಲ್ಲಿ ಸಾಕಷ್ಟು ಗೊಂದಲ‌ ನಿರ್ಮಾಣವಾಗಿದೆ.

ಅಲ್ಲದೇ ತಮ್ಮ‌ ನಿತ್ಯದ ಕೆಲಸ ಬಿಟ್ಟು ಅರ್ಜಿ ಸಲ್ಲಿಸಲು ಅನ್ನದಾತ ಸರತಿ ಸಾಲಿನಲ್ಲಿ ನಿಂತು ಕಾಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಅವಧಿಯನ್ನು ವಿಸ್ತರಣೆ ಮಾಡಿ ಅನ್ನದಾತನ ಕಷ್ಟಕ್ಕೆ ಸರ್ಕಾರ ಸ್ಪಂದಿಸುವ ಕಾರ್ಯವನ್ನು ಮಾಡಬೇಕಿದೆ.

Edited By : Manjunath H D
Kshetra Samachara

Kshetra Samachara

25/11/2021 11:56 am

Cinque Terre

35.45 K

Cinque Terre

0

ಸಂಬಂಧಿತ ಸುದ್ದಿ