ಹುಬ್ಬಳ್ಳಿ: 'ಕಷ್ಟದೊಳನ್ನವ ದುಡಿವನೆ ತ್ಯಾಗಿ, ಸೃಷ್ಟಿ ನಿಯಮದೊಳಗವನೇ ಭೋಗಿ'...ಈ ಸಾಲುಗಳನ್ನು ನಮ್ಮ ರಾಷ್ಟ್ರಕವಿ ಕುವೆಂಪು ಅವರು ಸುಮ್ಸುಮ್ನೆ ಹೇಳಿಲ್ಲ. ನಮ್ಮ ಹೆಮ್ಮೆಯ ಅನ್ನದಾತರ ದುಡಿಮೆ ಮತ್ತು ಹಿರಿಮೆ ಅಂತದ್ದು. ಅವರು, ಇಷ್ಟವಾದರೂ, ಕಷ್ಟವಾದರೂ, ನಷ್ಟವಾದರೂ ಕೃಷಿ ಕಾಯಕವನ್ನು ಬಿಡೋದೇ ಇಲ್ಲ. ಅಂತದ್ದೇ ಒಬ್ಬ ಛಲ ಬಿಡದ ಕೃಷಿಕ ಇಲ್ಲಿದ್ದಾರೆ. ಹುಬ್ಬಳ್ಳಿ ತಾಲೂಕು ಬ್ಯಾಹಟ್ಟಿ ಗ್ರಾಮದ ಯುವ ಅನ್ನದಾತ ಶಂಕರ್ ಪಾತರದ ಅವರ ಬಗ್ಗೆ ಇವತ್ತಿನ ದೇಶ್ ಕೃಷಿ ಸಂಚಿಕೆಯಲ್ಲಿ ತಿಳಿಯುವ ಬನ್ನಿ..
Kshetra Samachara
24/11/2021 10:50 pm