ಕುಂದಗೋಳ : ಅಕಾಲಿಕ ಮಳೆಗೆ ಬೆಳೆ ಹಾನಿಯಾದ ಪರಿಣಾಮ ಈಗಾಗಲೇ ಬೆಳೆ ವಿಮೆ ತುಂಬಿದ ರೈತರಿಂದ ವಿಮಾ ಕಂಪನಿಗಳು ಅಗತ್ಯ ದಾಖಲೆ ಸಂಗ್ರಹಿಸುತ್ತಿದ್ದು ಕುಂದಗೋಳ ಕೃಷಿ ನಿರ್ದೇಶಕರ ಕಚೇರಿ ಎದುರು ದಾಖಲೆ ನೀಡಲು ರೈತರು ಜಮಾಯಿಸಿದ್ದಾರೆ.
ಹೌದು ! ಈಗಾಗಲೇ ಬೆಳೆ ಕಳೆದುಕೊಂಡ ಅನ್ನದಾತ ಸರ್ಕಾರದ ಪರಿಹಾರವನ್ನರಸಿ ಅಗತ್ಯ ದಾಖಲೆ ಜೊತೆ ಕೆಲ ರೈತರು ಬೆಳೆ ಹಾನಿಯಾದ ಪೋಟೋ ಸಹ ನೀಡಿ, ಇವುಗಳನ್ನಾದ್ರೂ ಪರಿಶೀಲನೆ ಮಾಡಿ ನಮ್ಗೆ ಬೆಳೆ ವಿಮೆ ಕೊಡಿ ಎನ್ನುತ್ತಿದ್ದಾರೆ. ಇನ್ನೂ ಕೆಲ ರೈತರು ಹಿಂಗಾರು ಬೆಳೆ ವಿಮೆಗೆ ನ.30 ಕೊನೆ ದಿನ ಎನ್ನುತ್ತೀರಿ ದಾಖಲೆ ಪಡೆಯುವ ಅವಧಿ ಸಹ ವಿಸ್ತರಿಸಿ ಎಂಬ ಮಾತು ಸಹ ಕೇಳಿ ಬರುತ್ತಿವೆ.
ಅಕಾಲಿಕ ಮಳೆಗೆ ಬೆಳೆ ಜೊತೆ ಹೊಟ್ಟು ಮೇವು ಸಹ ಕೊಳೆತು ಹೋಗಿದೆ, ಸರ್ಕಾರ ಈ ಬಗ್ಗೆ ಗಮನ ಹರಿಸಲಿ ಹೊಟ್ಟು ಮೇವು ನೀಡಲು ರೈತರು ಮನವಿ ಮಾಡಿದ್ದಾರೆ.
ಒಟ್ಟಾರೆ ಸರ್ಕಾರ ಹಾಗೂ ವಿಮಾ ಕಂಪನಿಗಳು ಅನ್ನದಾತನ ಕಷ್ಟಕ್ಕೆ ಮಿಡಿದು ಬೆಳೆ ವಿಮೆ ಜೊತೆ ದಾಖಲೆ ಪಡೆಯುವ ಅವಧಿ ಸಹ ವಿಸ್ತರಿಸಬೇಕಿದೆ.
Kshetra Samachara
23/11/2021 04:11 pm