ಧಾರವಾಡ: ಸದ್ಯ ಸುರಿಯುತ್ತಿರುವ ಅಕಾಲಿಕ ಮಳೆ ಇಡೀ ರೈತ ಸಮುದಾಯದ ನಿದ್ದೆಗೆಡಿಸಿದೆ. ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹೊಲ ಗದ್ದೆಗಳಿಗೆ ನೀರು ನುಗ್ಗಿ ರೈತರ ಕಣ್ಣಲ್ಲಿ ನೀರು ತರಿಸುವಂತೆ ಮಾಡಿದೆ.
ಹಿಂಗಾರು ಹಂಗಾಮಿನ ಬೆಳೆಗಳಾದ ಕಡಲೆ, ಜೋಳ, ಗೋದಿ ಬೆಳೆಗಳು ಸಂಪೂರ್ಣ ನೀರಿನಲ್ಲಿ ನಿಂತಿದ್ದು, ಮುಂದೆನಾಗುತ್ತದೆಯೋ ಎನ್ನುವ ಭೀತಿಯಲ್ಲಿ ರೈತ ಸಮುದಾಯ ಬದುಕುವಂತಾಗಿದೆ.
ಹಿಂಗಾರು ಬಿತ್ತನೆ ನಂತರ ಕೊಂಚ ಮಳೆಯ ಅವಶ್ಯಕತೆ ಇತ್ತು. ಆದರೆ, ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಈ ಮಳೆ ಹಿಂಗಾರು ಬೆಳೆಗೆ ಪೂರಕವಾಗದೇ ಮಾರಕವಾಗಿ ಪರಿಣಮಿಸಿದೆ.
Kshetra Samachara
19/11/2021 06:29 pm