ನವಲಗುಂದ : ಮಣ್ಣನ್ನೇ ನಂಬಿ ಮಣ್ಣಲ್ಲೇ ಹೊಸ ಹೊಸ ಸಾಧನೆ ಮಾಡ್ಬೇಕು, ಕೃಷಿಯನ್ನು ಜನ ಒಂದು ಉದ್ಯಮ ಎಂಬತ್ತೇ ನೋಡ್ಬೇಕು ಎಲ್ಲರೂ ಕೃಷಿ ಎಡೆಗೆ ಬರ್ಬೇಕು ಎನ್ನುವ ರೈತರ ಹುಮ್ಮಸ್ಸಿಗೆ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ಮತ್ತಷ್ಟೋ ಬಲ ತುಂಬಿ ಕೃಷಿಯಲ್ಲಿ ಹೊಸ ವಿನ್ಯಾಸ ತಂದಿದೆ.
ಇದೇ ಮೊದಲು ಆಯಾ ಜಿಲ್ಲೆ ನಗರಕ್ಕೆ ಸೀಮಿತವಾಗಿದ್ದ ರೇಷ್ಮೆ ಬೆಳೆ ಸೇರಿದಂತೆ ಒಣ ಬೇಸಾಯದ ನೆಲದಲ್ಲೂ ಹೊಸ ಹೊಸ ಬೆಳೆ ಬೆಳೆಯಬಹುದು ಎಂದು ತೋರಿಸಿಕೊಟ್ಟವರೇ ನವಲಗುಂದ ತಾಲೂಕಿನ ಶಾನವಾಡ ಗ್ರಾಮದ ರೈತ ನಿಂಗಪ್ಪ ಹೊಂಡೇದ.
ತಮ್ಮ 20 ಎಕರೆ ಜಮೀನಿನಲ್ಲಿ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ 400/250 ಸುತ್ತಳತೆ ಕೃಷಿಹೊಂಡ ನಿರ್ಮಿಸಿಕೊಂಡ ಇವರು ಮುಂಗಾರು ಹೆಸರು, ಗೋವಿನಜೋಳ, ಹತ್ತಿ, ಈರುಳ್ಳಿ, ಕಬ್ಬು ಸೇರಿದಂತೆ ಕಳೆದ ಆರು ವರ್ಷಗಳಿಂದ ರೇಷ್ಮೆ ಬೆಳೆ ಬೆಳೆದು ಲಕ್ಷ ಲಕ್ಷ ಆದಾಯದ ಮಾರ್ಗವನ್ನು ಇಷ್ಟ ಪಟ್ಟು ಮುನ್ನೆಡೆಸುತ್ತಿದ್ದಾರೆ.
ಇದೇ ಒಣ ಬೇಸಾಯದ ಭೂಮಿಯಲ್ಲಿ ನೀರಾವರಿ ಇದ್ದರೂ ಸಹ 150 ಕಿಲೋ ಮೀಟರ್ ಪೈಪ್ಲೈನ್ ಅಳವಡಿಸಿ ಭೂಮಿಗೆ ನೀರು ಉಣಿಸುತ್ತಿದ್ದ ರೈತರಿಗೆ, ಕೃಷಿಹೊಂಡ ಅತಿ ಅನುಕೂಲದ ಅತಿ ಸರಳ ವಿಧಾನದ ಕೃಷಿ ಬದುಕನ್ನು ರೈತರಿಗೆ ಒದಗಿಸಿಕೊಟ್ಟಿದೆ.
ಈಗಾಗಲೇ ರೈತ ನಿಂಗಪ್ಪ ಹೊಂಡೇದ್ ಅವರು ತಮ್ಮ 20 ಎಕರೆ ಭೂಮಿಯ ಕೃಷಿ ಬದುಕಿನ ಏರಿಳಿತದ ಆದಾಯದಲ್ಲಿ ವರ್ಷಕ್ಕೆ ಹತ್ತು ಲಕ್ಷದವರೆಗೂ ಆದಾಯ ಸಂಪಾದನೆ ಮಾಡುತ್ತಾ ಅದೆಷ್ಟೋ ಕೃಷಿಕರಿಗೆ ಕೃಷಿಹೊಂಡದ ಪ್ರಯೋಜನದ ಬಗ್ಗೆ ತಿಳಿಸುತ್ತಿದ್ದಾರೆ.
Kshetra Samachara
12/11/2021 04:34 pm