ನವಲಗುಂದ : ಇಲ್ಲೋಬ್ಬ ರೈತನ ಹೊಲದಲ್ಲಿ ಜೀವಜಲ ಜೀವನಾಧಾರವಾಗಿ, ವರ್ಷ ಕಳೆದ್ರೂ ಸಾಕು ಫಸಲು ಬಂದ್ರೇ ಸಾಕು ಲಕ್ಷ ಲಕ್ಷ ಆದಾಯ ತರುವಲ್ಲಿ ಪ್ರಮುಖವಾಗಿ ರೈತರನ್ನ ಅರಸರನ್ನಾಗಿ ಮಾಡಿ ಕೃಷಿ ಬದುಕಿಗೆ ಹೊಸ ಕಳೆ ತಂದಿದೆ.
ಈ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ನಿರ್ಮಾಣ ಯೋಜನೆ ಯಾವಾಗ ರೈತರು ಮನೆ ಬಾಗಿಲನ್ನು ತಟ್ಟಿತೋ, ಅಂದೇ ಕೃಷಿ ಲಕ್ಷ್ಮೀ ವಿರಾಜಮಾನವಾಗಿ ಅನ್ನದಾತನ ಜಮೀನಿನಲ್ಲಿ ನೆಲೆ ನಿಂತು ಉತ್ತಮ ಫಸಲಿನ ಕೊಡುಗೆಯನ್ನು ನವಲಗುಂದ ತಾಲೂಕಿನ ಸೊಟಕನಹಾಳ ಗ್ರಾಮದ ರೈತ ಪಿರಸಾಬ್ ನಾಯ್ಕರ್'ಗೆ ನೀಡಿದ್ದಾಳೆ.
ಈ ಪಿರಸಾಬ್ ನಾಯ್ಕರ್ ತನ್ನ 16 ಎಕರೆ ಜಮೀನಿನಲ್ಲಿ ಮುಂಗಾರು ಹೆಸರು, ಗೋವಿನಜೋಳ, ಈರುಳ್ಳಿ, ಸೂರ್ಯಕಾಂತಿ ಬೆಳೆ ಬೆಳೆದು ಈಗಾಗಲೇ ಈರುಳ್ಳಿ ಹಾಗೂ ಹೆಸರು ಬೆಳೆಯನ್ನು ಮಾರುಕಟ್ಟೆ ತಲುಪಿಸಿ ಬರೋಬ್ಬರಿ ಒಂದು ಲಕ್ಷ ಗರಿಷ್ಠ ಆದಾಯ ಸಂಪಾದಿಸಿದ್ದಾರೆ. ಅದು ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ 160/160 ಸುತ್ತಳತೆ ಕೃಷಿಹೊಂಡ ಆಶ್ರಿತ ಬೇಸಾಯದ ಮೂಲಕ.
ಇದೇ ಮೊದಲು ಒಣ ಬೇಸಾಯದ ಭೂಮಿಯಲ್ಲಿ ಎಕರೆಗೆ 10 ಸಾವಿರ ರೂಪಾಯಿ ಆದಾಯ ಕಷ್ಟವಾದ ಸಂದರ್ಭ ಪಿರಸಾಬ್ ಈ ಹಳ್ಳಿ ಬಿಟ್ಟು ತುತ್ತಿನ ಕೈ ಚೀಲ ಹಿಡಿದು ಛೋಟಾ ಮುಂಬೈ ಹುಬ್ಬಳ್ಳಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ, ಆದೇ ಈಗ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ನಿರ್ಮಾಣ ನಂತರ ಎಕರೆಗೆ 30-40 ಸಾವಿರ ಆದಾಯ ಸಂಪಾದನೆ ಮಾಡುತ್ತಾ ತನ್ನ ಹೊಲಕ್ಕೆ ಯಜಮಾನನಾಗಿ, ಮತ್ತೋಬ್ಬರ ಬಳಿ ಕೈ ಚಾಚದೇ ನಾಲ್ಕು ಜನಕ್ಕೆ ಅನ್ನ ನೀಡುವ ರೈತನಾಗಿದ್ದಾನೆ.
ಒಟ್ಟಾರೆ ರೈತ ಪಿರಸಾಬ್ ಹೊಲದಲ್ಲಿ ಸಧ್ಯ ಗೋವಿನಜೋಳ, ಸೂರ್ಯಕಾಂತಿ ಬೆಳೆ ಹೆಚ್ಚಿನ ಆದಾಯದ ನಿರೀಕ್ಷೆ ಹುಟ್ಟಿಸಿದ್ದು, ಹಿಂಗಾರು ಬಿತ್ತನೆಗೆ ಪಿರಸಾಬ್ ಸಜ್ಜಾಗಿ ದೇಶಪಾಂಡೆ ಫೌಂಡೇಶನ್ ಎಂದ್ರೇ ನಮ್ಮನೆ ದೇವ್ರು ಎನ್ನುತ್ತಾರೆ.
Kshetra Samachara
25/10/2021 10:40 am