ನವಲಗುಂದ : ಓದಿದ್ದು ಬಿಎ ಪದವಿಯಾದ್ರೂ ಇಲ್ಲೋಬ್ಬರಿಗೆ ಕಪ್ಪು ಭೂಮಿ ಆ ಭೂಮಿಗೆ ಆಸರೆಯಾದ ಕೃಷಿಹೊಂಡ ಆಶ್ರಿತ ಕೃಷಿ ಹೊಸ ಬದುಕು ಕಟ್ಟಿಕೊಟ್ಟು ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎಂಬುದನ್ನು ಸಾಬೀತು ಮಾಡಿ ತೋರಿಸಿದೆ.
ಮೇಟಿ ವಿದ್ಯೆಯ ಮೇಲು ಎಂಬ ನಿದರ್ಶನಕ್ಕೆ ನವಲಗುಂದ ತಾಲೂಕಿನ ಸೊಟಕನಹಾಳ ಗ್ರಾಮದ ರಂಗರಡ್ಡಿ ಕಿರೇಸೂರು ಬದುಕು ಪಾತ್ರವಾಗಿ ಅದೆಷ್ಟೋ ವಿದ್ಯಾವಂತರಿಗೆ ಮಣ್ಣಲ್ಲೇ ಅನ್ನ ಕಂಡುಕೊಳ್ಳುವ ಮಾರ್ಗ ಹೇಳಿಕೊಟ್ಟು, ತಾವು ಸಹ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ ಕೃಷಿಹೊಂಡ ನಿರ್ಮಾಣ ಮಾಡಿಕೊಂಡು ವಾರ್ಷಿಕ 20 ಲಕ್ಷ ರೂಪಾಯಿ ಹೆಚ್ಚಿನ ಆದಾಯ ಪಡೆದಿದ್ದಾರೆ.
ತಮ್ಮ ಒಟ್ಟು 25 ಎಕರೆ ಜಮೀನ ಕೃಷಿ ಕಾಯಕಕ್ಕೆ ನೆರವಾಗಲು 160/160 ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡ ಇವರು ನೀರಾವರಿ ಆಶ್ರಿತವಾಗಿ ಅಲಕ್ಷ್ಯ ಮಾಡದೆ ಸಮಯೋಚಿತ ದುಡಿಮೆ ಮಾಡಿ ಹೆಸರು, ಗೋವಿನಜೋಳ, ಈರುಳ್ಳಿ, ಸೂರ್ಯಕಾಂತಿ ಬೆಳೆ ಬೆಳೆದು ಸಧ್ಯ ಲಕ್ಷ ಲಕ್ಷ ಆದಾಯದ ಸನ್ಮಾರ್ಗದ ಪ್ರಯಾಣ ಬೆಳೆಸಿದ್ದಾರೆ.
ತಮ್ಮ 43ನೇ ವಯಸ್ಸಿನಲ್ಲಿ ಪದವೀಧರ ಕೃಷಿಕನಾಗಿ ಹೆಮ್ಮೆ ಕಂಡುಕೊಂಡ ಇವರು, ಯಾವ ನೌಕರಿ ಅರಸದೇ ಪ್ಯಾಟಿ ಸುತ್ತದೆ ಈ ಹಳ್ಳಿ ಹಳ್ಳಿಯ ಜನರ ನಡುವೆ ಇದ್ದು, ತಮ್ಮ ಜಮೀನಿನಲ್ಲಿ ನಾಲ್ಕು ಜನಕ್ಕೆ ದುಡಿಮೆ ನೀಡಿ ಅವರಿಗೂ ಸಹ ಬದುಕು ಕಟ್ಟಿಕೊಟ್ಟಲು ನೆರವಾಗಿದ್ದಾರೆ.
ಇದೇ ಮೊದಲು ಒಣ ಬೇಸಾಯ ಮಾಡಿ ಎಕರೆಗೆ 20 ಸಾವಿರ ಆದಾಯಗಳಿಕೆಗೆ ಒಗ್ಗದ ರಂಗರಡ್ಡಿಯವರ ಕೃಷಿ ಭೂಮಿ ಇಂದು ಕೃಷಿಹೊಂಡ ಆಶ್ರಿತ ನೀರಾವರಿ ಬೆಳೆ ಮೂಲಕ ಎಕರೆಗೆ 30 ರಿಂದ 35 ಸಾವಿರ ಆದಾಯ ದುಪ್ಪಟ್ಟು ನೀಡುತ್ತಿದೆ. ಒಟ್ಟಾರೆ ಕೃಷಿಹೊಂಡ ನಿರ್ಮಾಣ ಮಾಡಿಕೊಂಡ ರೈತರ ಬಾಳಲ್ಲಿ ಎಂದು ಮಾಸದ ನಗೆ ಪ್ರಕಾಶಮಾನವಾಗಿದೆ.
Kshetra Samachara
23/10/2021 03:15 pm