ನರಗುಂದ : ಕೃಷಿಯಲ್ಲಿ ಇಂತಹದೊಂದು ಯೋಜನೆ ಬರುತ್ತೆ ಬರಿ ಬಟನ್ ಒತ್ತಿದ್ರೇ ಸಾಕು ಇಡೀ ಹೊಲಕ್ಕೆಲ್ಲಾ ನೀರು ತಲುಪತ್ತೇ ಎಂದು ನಾವು ಅಂದುಕೊಂಡಿರಲಿಲ್ಲ, ಈ ಕೃಷಿಹೊಂಡ ಇಷ್ಟೋಂದು ಫಲದಾಯಕ ಎಂಬುದು ನಮ್ಗೆ ಈಗಲೇ ತಿಳದದ್ದು ಇದು ರೈತ ಲೇಸಪ್ಪ ಭಗವಂತಪ್ಪ ಕಟ್ಟಿಮನಿ ಅವರು ಮಾತು.
ವಯಸ್ಸು ಅರವತ್ತರ ಸನಿಹ ಬಂದ್ರೇ ಸಾಕು ನಾವು ನೀವೆಲ್ಲಾ ವೃತ್ತಿಯಿಂದ ನಿವೃತ್ತಿ ಪಡೆದು ಹಾಯಾಗಿರೋಣ ಎನ್ನುವ ದಿನಗಳಲ್ಲಿ ನರಗುಂದ ತಾಲೂಕಿನ ಗಂಗಾಪೂರ ಗ್ರಾಮದ ರೈತ ತನ್ನ ಅರವತ್ತರ ಇಳಿ ಹರೆಯದಲ್ಲೂ ಈ ರೀತಿ ಕೃಷಿಯಲ್ಲಿ ಕೆಲಸ ಮಾಡುತ್ತಾ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.
ಊರಲ್ಲಿನ ಹಿರಿಯರು ವಿದ್ಯಾವಂತ ಮಗನ ಸಹಕಾರದಿಂದ ತಮ್ಮ 12 ಏಕರೆ ಜಮೀನಿನಲ್ಲಿ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ನಿರ್ಮಾಣ ಮಾಡಿಕೊಂಡು ಇವರು ಒಣ ಬೇಸಾಯಕ್ಕಿಂತ ಕಡಿಮೆ ಶ್ರಮದಲ್ಲಿ 5 ಲಕ್ಷ ಆದಾಯದ ಗುರಿ ಹೊಂದಿದ್ದಾರೆ.
ಈಗಾಗಲೇ ತಮ್ಮ ಜಮೀನಿನಲ್ಲಿ ಕೃಷಿಹೊಂಡ ಆಶ್ರೀತವಾಗಿ ಹೆಸರು ಗೋವಿನಜೋಳ ಬೆಳೆದು ಇವರು ಹೆಸರು ಒಕ್ಕಲು ಮಾಡಿ ಗೋವಿನಜೋಳ ಏಕರೆಗೆ 30 ಕ್ವಿಂಟಾಲ್ ಫಸಲು ತೆಗೆಯುವ ವಿಶ್ವಾಸದಲ್ಲಿದ್ದಾರೆ.
ಕೃಷಿಹೊಂಡ ಕೃಷಿ ಜೊತೆ ಹೊಲದಲ್ಲಿ ಗೋ ಸಾಕಾಣಿಕೆ ಆಸಕ್ತಿ ಹೊಂದಿರುವ ಇವರು ತಮ್ಮ ಅನುಕೂಲಕ್ಕೆ ತಕ್ಕ ಹಾಗೇ ಗೋ ಸಾಕಾಣಿಕೆ ಆರಂಭವಿಸುವ ನಿರ್ಧಾರ ಮಾಡಿದ್ದು ಆ ಪ್ರೀತಿಗಾಗಿ ಮನೆಯಲ್ಲಿ ಎರೆಡು ಆಕಳು ಸಹ ಇವರ ಕೃಷಿ ಕಾಯಕದಲ್ಲಿ ಸ್ನೇಹಿತರಾಗಿದ್ದಾರೆ.
ಒಟ್ಟಾರೆ ನಿವೃತ್ತಿ ಸಮಯದಲ್ಲೂ ಹೆಚ್ಚು ಕೃಷಿಯಲ್ಲಿ ಹೆಚ್ಚು ಕ್ರೀಯಾಶೀಲತೆ ಹೊಂದಿದ ರೈತ ಲೇಸಪ್ಪ ಕಟ್ಟಿಮನಿ ಇನ್ನೂ ಗಟ್ಟಿ.
Kshetra Samachara
03/10/2021 02:55 pm