ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಕಿ ಪಾವತಿಗೆ ಸಕ್ಕರೆ ಕಾರ್ಖಾನೆಗಳಿಗೆ 2 ದಿನ ಗಡುವು : ಸಚಿವ ಮುನೇನಕೊಪ್ಪ

ಬೆಂಗಳೂರು: ರೈತರಿಗೆ ಒಟ್ಟು 42 ಕೋಟಿ ಹಣ ಪಾವತಿಸುವುದನ್ನು ಬಾಕಿ ಉಳಿಸಿಕೊಂಡಿದ್ದ 7 ಸಕ್ಕರೆ ಕಾರ್ಖಾನೆಗಳಿಗೆ 2 ದಿನದೊಳಗೆ ರೈತರಿಗೆ ಬಾಕಿ ಪಾವತಿಸುವಂತೆ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತಿಳಿಸಿದರು. ಬಾಕಿ ಉಳಿಸಿಕೊಂಡಿರುವ ಕಾರ್ಖಾನೆಗಳು ಆಕ್ಟೋಬರ್ 03 ರೊಳಗೆ ಹಣ ಪಾವತಿ ಮಾಡುವಂತೆ ಸೂಚನೆ ನೀಡಲಾಗಿದೆ. ಈಗಾಗಲೇ ಬಸವೇಶ್ವರ ಶುಗರ್ಸ್ ಹಾಗೂ ಕೋರ್ ಗ್ರೀನ್ ಶುಗರ್ಸ್ ಕಾರ್ಖಾನೆಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ವಸೂಲಾತಿಗೆ ನೊಟೀಸ್ ಜಾರಿಗೊಳಿಸಲಾಗಿದೆ.

ಉಳಿದ ಕಾರ್ಖಾನೆಗಳು ಇನ್ನೆರಡು ದಿನಗಳಲ್ಲಿ ರೈತರಿಗೆ ಹಣ ಪಾವತಿಸದಿದ್ದರೆ ಜಿಲ್ಲಾಧಿಕಾರಿಗಳ ಮೂಲಕ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತಾಕೀತು ಮಾಡಿದರು.

ಸೋಮೇಶ್ವರ ಎಸ್. ಎಸ್. ಕೆ .ಲಿ. ಬೈಲಹೊಂಗಲ, ಬೆಳಗಾವಿ – 69 ಲಕ್ಷ, ಜಮಖಂಡಿ ಶುಗರ್ಸ್ ಲಿ. ಹಿರೆಪಡಸಲಗಿ, ಜಮಖಂಡಿ, ಬಾಗಲಕೋಟೆ- 1 ಕೋಟಿ 5 ಲಕ್ಷ, ನಿರಾಣಿ ಶುಗರ್ಸ್ ಲಿ. ಮುಧೋಳ, ಬಾಗಲಕೋಟೆ – 5 ಕೋಟಿ 67 ಲಕ್ಷ, ಶ್ರೀ ಸಾಯಿಪ್ರಿಯಾ ಶುಗರ್ಸ್ ಲಿ. ಹಿಪ್ಪರಗಿ, ಬಾಗಲಕೋಟೆ – 4 ಕೋಟಿ 15 ಲಕ್ಷ, ಬೀದರ್ ಕಿಸಾನ್ ಸಕ್ಕರೆ ಕಾರ್ಖಾನೆ ಲಿ. ಬೀದರ್ – 2 ಕೋಟಿ 9 ಲಕ್ಷ, ಶ್ರೀ ಬಸವೇಶ್ವರ ಶುಗರ್ಸ್ ಲಿ, ಕಾರಜೋಳ, ವಿಜಯಪುರ – 22 ಕೋಟಿ 11 ಲಕ್ಷ, ಕೋರ್ ಗ್ಲೀನ್ ಶುಗರ್ಸ್ ಅಂಡ್ ಫ್ಯೂಯೆಲ್ಸ್ ಪ್ರೈ ಲಿ. ಶಹಾಪುರ, ಯಾದಗಿರಿ- 6 ಕೋಟಿ 41 ಲಕ್ಷ ಬಾಕಿ ಪಾವತಿಸಬೇಕಿದೆ.

Edited By : Nirmala Aralikatti
Kshetra Samachara

Kshetra Samachara

01/10/2021 10:53 pm

Cinque Terre

10.75 K

Cinque Terre

0

ಸಂಬಂಧಿತ ಸುದ್ದಿ