ನರಗುಂದ : ನಮ್ಗೆ ಸಾಲಿನೂ ಬಾಳ್ ಹತ್ತಲಿಲ್ಲ ರೀ, ಬ್ಯಾರೇ ಉದ್ಯೋಗ ಮಾಡಾಕನೂ ಬರೂದಿಲ್ಲಾ, ಆದ್ರ ಕೃಷಿಹೊಂಡ ನಿರ್ಮಾಣ ಮಾಡಸಕೊಂಡ್ ಮ್ಯಾಲ್ ಆರಾಮ ಅದೇವ್ರಿ ತುತ್ತು ಅನ್ನ ನಮ್ಮ ಹೊಲದಾಗ ದುಡದ ತಿನ್ನತೇವಿ ಅನ್ನೋ ಧೈರ್ಯ ಐತಿ ಎಂತಾರೆ ರೈತ ಕಲ್ಲಪ್ಪ ಬಸಪ್ಪ ಬ್ಯಾಹಟ್ಟಿ.
ಎಸ್.! ಅಪ್ಪಟ ಹಳ್ಳಿ ಸೀಮೆ ಮಕ್ಕಳಿಗೆ ಇಂತಹದ್ದೊಂದು ಧೈರ್ಯ. ಕೃಷಿಯಲ್ಲೇ ಏಳ್ಗೆಯ ದಾರಿ ತೋರಿಸಿಕೊಟ್ಟಿದ್ದೆ ದೇಶಪಾಂಡೆ ಫೌಂಡೇಶನ್. ಇದೇ ನರಗುಂದ ತಾಲೂಕಿನ ಕುರ್ಲಗೇರಿ ಗ್ರಾಮದ ರೈತರು ಒಣ ಬೇಸಾಯದಲ್ಲಿ ಬೆವರು ಹರಿಸಿ ಸುಸ್ತಾದ ದಿನಗಳಲ್ಲಿ ಭಾಗೀರಥಿಯಂತೆ ವರವಾಗಿ ಬಂದ ಕೃಷಿಹೊಂಡ ರೈತರ ಬದುಕನ್ನು ಹಸನಾಗಿಸಿದೆ.
ಈ ನೂರು ನೂರು ಸುತ್ತಳತೆಯ ಕೃಷಿಹೊಂಡ ಆಶ್ರಿತವಾಗಿ ರೈತ ಕಲ್ಲಪ್ಪ ಬಸಪ್ಪ ಬ್ಯಾಹಟ್ಟಿ ತನ್ನ 7 ಎಕರೆ ಹೊಲದಲ್ಲಿ ಗೋವಿನಜೋಳ ಬೆಳೆದಿದ್ದು ಬೆಳೆ ತೆನೆ ಎರೆಡು ಭಾಗ್ಯದ ಬಾಗಿಲು ತಟ್ಟಿ ಈ ಬಾರಿ ನಿವ್ವಳ ಎರೆಡು ವರೆ ಲಕ್ಷ ರೂಪಾಯಿ ಆದಾಯಕ್ಕೆ ಬರವಿಲ್ಲಾ ಎನ್ನುತ್ತಿದ್ದು ರೈತರ ಜಾನುವಾರುಗಳಿಗೆ ಹೊಟ್ಟು ಮೇವಿನ ಕೊರತೆ ಸಹ ಹಿಂಗಿದಂತಾಗಿದೆ.
ಬೈಟ್.1 ಕಲ್ಲಪ್ಪ ಬಸಪ್ಪ ಬ್ಯಾಹಟ್ಟಿ, ಕುರ್ಲಗೇರಿ ಗ್ರಾಮದ ರೈತ
ಈ ಹಿಂದೆ ಒಣ ಬೇಸಾಯಕ್ಕೆ ಹೆಸರು, ಕಡಲೆ ಬೆಳೆ ಭೂಮಿಗೆ ಹಾಕಿದ ಹಣ ಕೈ ಸೇರದ ಪರಿಸ್ಥಿತಿಯಲ್ಲಿದ್ದ ರೈತರಿಗೆ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಾಗ ನಿರ್ಮಾಣವಾದ ಕೃಷಿಹೊಂಡ ಹೊಸ ಬದುಕು ಕಲ್ಪಿಸಿ ಹೊಸ ಭಾಷ್ಯ ಬರೆದಿದೆ. ಇನ್ನೂ ವರಣ ದಾರಿ ಕಾಯುವ ಅಡಿಗಟ್ಟಲೇ ಭೂಮಿ ಸೀಳಿದರು ನೀರು ಸಿಗದ ಸ್ಥಿತಿ ಮಾಯವಾಗಿ ಕೃಷಿಹೊಂಡದಲ್ಲಿ ಗಂಗೆ ಶಾಶ್ವತವಾಗಿ ನೆಲೆಸಿದ್ದಾಳೆ.
ರೈತರೇ ನಿಮಗೂ ಕೃಷಿಹೊಂಡದಲ್ಲಿ ಆಸಕ್ತಿ ಇದೆಯಾ ಹಾಗಿದ್ದಲ್ಲಿ ತಡಮಾಡದೇ ದೇಶಪಾಂಡೆ ಫೌಂಡೇಶನ್'ಗೆ ಭೇಟಿ ಕೊಡಿ.
Kshetra Samachara
21/09/2021 06:09 pm