ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಕಾಡು ಪ್ರಾಣಿಗಳಿಂದ ಬೆಳೆ ಹಾನಿ: ಪರಿಹಾರಕ್ಕೆ ರೈತರ ಒತ್ತಾಯ

ಕಲಘಟಗಿ: ತಾಲೂಕಿನ ಆಸ್ತಕಟ್ಟಿ ಗ್ರಾಮದ ಅರಣ್ಯದಂಚಿನ ಜಮೀನುಗಳಲ್ಲಿನ ಬೆಳೆಯನ್ನು ಕಾಡು ಪ್ರಾಣಿಗಳು ತಿಂದು ಹಾಳ ಮಾಡುತ್ತಿದ್ದು,ಪರಿಹಾರ ನೀಡ ಬೇಕು ಎಂದು ರೈತರು ವಲಯ ಅರಣ್ಯಾಧಿಕಾರಿ ಶ್ರೀಕಾಂತ ಪಾಟೀಲಗೆ ಮನವಿ ನೀಡಿ ಒತ್ತಾಯಿಸಿದರು.

ಕಾಡು ಪ್ರಾಣಿಗಳಿಂದ ಬೆಳೆದ ಬೆಳೆ ಕೈಗೆ ಬಾರದೇ ನಷ್ಟ ಉಂಟಾಗಿದೆ.ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು‌ ಹಾಗೂ ಕಾಡು ಪ್ರಾಣಿಗಳ ಕಾಟ ತಪ್ಪಿಸಲು ಶಾಶ್ವತ ತಂತಿ ಬೇಲಿ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ಆರ್ ಎಫ್ ಓ ಶ್ರೀಕಾಂತ ಪಾಟೀಲ ಮನವಿ ಸ್ವೀಕರಿಸಿ ಮಾತನಾಡಿ ಕಾಡು ಪ್ರಾಣಿಗಳ ಹಾವಳಿ ತಡೆಯಲು ತಂತಿ ಬೇಲಿ ವ್ಯವಸ್ಥೆಯನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಕೆಲಸ‌ ಮಾಡಲಾಗುವದು ಎಂದರು.

ಈ ಸಂದರ್ಭದಲ್ಲಿ ಶಿವಪ್ಪ ಲಮಾಣಿ,ಬಿ ವಾಯ್ ಪಾಟೀಲ,ಶಿವಪುತ್ರಪ್ಪ ಹೀರೆಮಠ,ನೀಲಪ್ಪ ಲಮಾಣಿ,ಬಸಪ್ಪ ಹಂಚಿನಮನಿ,ಪುನ್ನಪ್ಪ ಲಮಾಣಿ,ಬಸಣ್ಣ ಬಾಳಪ್ಪನವರ,ರೇಕಪ್ಪ ಗೋಲೆನವರ,ಶಂಕ್ರಪ್ಪ ಲಮಾಣಿ,ಮರೆಯಪ್ಪ ಕೂಂಕುರ,ಬಸಪ್ಪ ತುಳಜಪ್ಪನವರ ಇದ್ದರು.

Edited By : Shivu K
Kshetra Samachara

Kshetra Samachara

18/09/2021 12:46 pm

Cinque Terre

19.53 K

Cinque Terre

0

ಸಂಬಂಧಿತ ಸುದ್ದಿ