ಹುಬ್ಬಳ್ಳಿ: ಅದು ರಾಷ್ಟ್ರೀಯ ವಾಣಿಜ್ಯ ಬೆಳೆಯಲ್ಲಿ ಒಂದಾಗಿರುವ ಬೆಳೆ. ಆದರೆ ಈ ಬೆಳೆಗೆ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಲೇ ಇದೆ. ಈ ಬೆಳೆಯನ್ನು ನಂಬಿಕೊಂಡು ಸಾಲ ಮಾಡಿ ಬಿತ್ತನೆ ಮಾಡಿದ್ದ ರೈತನ ಬದುಕು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಹಾಗಿದ್ದರೇ ಯಾವುದು ಆ ಬೆಳೆ..? ಬಂದಿರುವ ಸಂಕಷ್ಟ ಆದರೂ ಏನು ಅಂತೀರಾ ಈ ಸ್ಟೋರಿ ನೋಡಿ.
ರೈತನ ಜೀವನ ನಿಜಕ್ಕೂ ಹೂವಿನ ಹಾಸು ಅಲ್ಲವೇ ಅಲ್ಲ. ರೈತ ತನ್ನ ಬದುಕಿನಲ್ಲಿ ಒಂದಿಲ್ಲೊಂದು ಕಷ್ಟಗಳನ್ನು ಎದುರಿಸುತ್ತಲೇ ಬಂದಿದ್ದಾನೆ. ಆದರೆ ಈಗ ಮೆಣಸಿನಕಾಯಿಗೆ ಮುಟ್ಟಿಗೆ ರೋಗ ಬಂದಿದ್ದು, ಈ ರೋಗದಿಂದ ನಿರೀಕ್ಷೆ ಇಟ್ಟುಕೊಂಡಿದ್ದ ರೈತನ ಜೀವನ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ಹೌದು.. ಜಿಲ್ಲೆಯಾದ್ಯಂತ ಸಾಕಷ್ಟು ಪ್ರಮಾಣದಲ್ಲಿ ಮೆಣಸಿನಕಾಯಿ ಬೆಳೆಯನ್ನು ಹಾಕಿದ್ದು, ಆದರೆ ಕೈಗೆ ಬರುವ ಸಮಯದಲ್ಲೇ ಮುಟ್ಟಿಗೆ ರೋಗ ಕಾಣಿಸಿಕೊಂಡಿದ್ದು, ರೈತನ ಗಾಯದ ಜೀವನದ ಮೇಲೆ ಬರೆ ಎಳೆದಂತಾಗಿದೆ. ಇನ್ನೂ ಈ ಬಗ್ಗೆ ಕೃಷಿ ಇಲಾಖೆಯ ಅಧಿಕಾರಿಗಳು ರೈತರ ಜೊತೆಗೆ ಸ್ಪಂದಿಸಿದೇ ಇರುವುದು ಹಾಗೂ ರೋಗ ನಿವಾರಣೆಗೆ ಸೂಕ್ತ ಪರಿಹಾರ ಕಲ್ಪಿಸದೇ ಇರುವುದು ಅನ್ನದಾತನ ಬದುಕು ಸಂಕಷ್ಟದ ಸುಳಿಯಲ್ಲಿ ಸಿಲುಕಿದೆ.
ಈಗಾಗಲೇ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ, ಡೊಣ್ಣ ಮೆಣಸಿನಕಾಯಿ ಬೆಳೆಯನ್ನು ಬೆಳೆದಿದ್ದು, ಕೈಗೆ ಬಂದಿರುವ ತುತ್ತು ಬಾಯಿಗೆ ಬರದಂತಾಗಿದ್ದು, ಈ ಬಗ್ಗೆ ಕೃಷಿ ಇಲಾಖೆಯ ಅಧಿಕಾರಿಗಳು ಸಮೀಕ್ಷೆ ನಡೆಸಿ ರೈತರಿಗೆ ಸೂಕ್ತ ಸಲಹೆಗಳನ್ನು ನೀಡುವ ಮೂಲಕ ರೈತನ ಕಷ್ಟ ಬಗೆಹರಿಸಬೇಕಿದೆ ಎಂದು ರೈತ ಸಮುದಾಯ ಆಗ್ರಹಿಸಿದೆ.
ಒಟ್ಟಿನಲ್ಲಿ ಮೆಣಸಿನಕಾಯಿ ರೋಗಕ್ಕೆ ಮುಟ್ಟಿಗೆ ರೋಗ ಆವರಿಸಿದ್ದು, ಯಾವುದೇ ರೋಗ ನಿರೋಧಕ ಔಷಧೀಯ ಸಿಂಪಡಣೆ ಮಾಡಿದರೂ ಕೂಡ ಇಳುವರಿಯಲ್ಲಿ ಸಮಸ್ಯೆ ಉಂಟಾಗುವುದು ಅನಿವಾರ್ಯವಾಗಿದೆ. ಈ ಬಗ್ಗೆ ಕೃಷಿ ನಿರ್ದೇಶಕರು ಬೆಳೆ ಸಮೀಕ್ಷೆ ಮಾಡಿ ರೈತನ ಕಣ್ಣೀರು ಒರೆಸುವ ಕಾರ್ಯ ಮಾಡಬೇಕಿದೆ.
Kshetra Samachara
18/09/2021 12:16 pm