ನರಗುಂದ : ದೇವರು ಈ ಕೃಷಿಹೊಂಡ ಕಡಸಕೊಂಡ್ ಮ್ಯಾಲ್ ಚಲೋ ಮಾಡ್ಯಾನ್ರೀ, ಇಲ್ಲಾದ್ರ ಏನ್ರಿ ನಮ್ಮ ಪಾಡು ಇತ್ಲಾಗ ನೀರಾವರಿ ಇಲ್ಲಾ ಅತ್ಲಾಗ ಮಳಿ ಬರೋಬ್ಬರಿ ಇರಲಾದ್ರ ಕಷ್ಟ ಆಗಿತ್ತು, ಈಗ ಆರಾಮ್ ಅದೇವ್ರಿ ಬರೋಬ್ಬರಿ 8 ರಿಂದ 10 ಲಕ್ಷ ಆದಾಯದ ದುಡಿಮೆ ಮಾಡತೇವ್ರಿ ಈ ಮಾತ್ ಹೇಳಿದ್ದು ಫ್ರಭಯ್ಯ ಬಸವಣ್ಣಯ್ಯ ಹಿರೇಮಠ.
ತಮ್ಮ 50 ವರ್ಷದ ಕೃಷಿ ಬದುಕಿನಲ್ಲಿ ನಷ್ಟ ಹಾದಿಗೆ ತುತ್ತಾದ ಹದಲಿ ಗ್ರಾಮದ ಈ ರೈತನಿಗೆ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಾಗ ನಿರ್ಮಾಣವಾದ ನೂರು ನೂರು ಸುತ್ತಳತೆಯ ಕೃಷಿ ಹೊಂಡ ಉಜ್ವಲ ಭವಿಷ್ಯ ಬರೆದಿದೆ.
ಈ ಕೃಷಿ ಹೊಂಡದ ಸಹಾಯದಿಂದಲೇ ತನ್ನ ಆರು ಎಕರೆ 50 ಗುಂಟೆ ಹೊಲದಲ್ಲಿ ಪೇರಲ, ಗೋವಿನಜೋಳ, ಈರುಳ್ಳಿ, ಹತ್ತಿ ಜೊತೆ ತರಕಾರಿ ಸೇರಿ ಮಿಶ್ರ ಬೆಳೆ ಬೆಳೆದ ರೈತ ಸಧ್ಯ ಹಸುನ್ಮುಖಿ ಆಗಿ ದೇಶಪಾಂಡೆ ಫೌಂಡೇಶನ್ ಸಹಾಯಕ್ಕೆ ಋಣಿಯಾಗಿದ್ದಾನೆ.
ಕೃಷಿ ಹೊಂಡದ ಇರದ ದಿನಗಳಲ್ಲಿ ಇದೇ ಆರು ಎಕರೆ ಐವತ್ತು ಗುಂಟೆ ಹೊಲದಲ್ಲಿ ಲಕ್ಷ ಆದಾಯ ಸಂಪಾದಿಸಲು ಹೆಣಗಾಡುತ್ತಿದ್ದ ರೈತನೀಗ ಬರೋಬ್ಬರಿ 8 ರಿಂದ 10 ಲಕ್ಷದ ಆದಾಯ ತೆಗೆದು ತನ್ನೂರಿನ ಇತರ ಕೃಷಿಕರಿಗೆ ಮಾದರಿ ಆಗಿದ್ದಾನೆ ಹಾಗೂ ತನ್ನಂತೆ ಕಷ್ಟದ ಬದುಕು ಸವೆಸುವ ರೈತರಿಗೆ ಸ್ವತಃ ತಾನೇ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಾಗ ಕೃಷಿಹೊಂಡ ನಿರ್ಮಿಸಿಕೊಳ್ಳಲು ಪೇರೆಪಿಸಿ ಸ್ಪಿಂಕ್ಲರ್ ಪೈಪ್ ಮೂಲಕ ಕಾರಂಜಿ ಕೃಷಿಯಲ್ಲೇ ಹೊಸ ಕ್ರಾಂತಿ ಮಾಡಿ ಎಲ್ಲ ವಿಧದ ಬೆಳೆ ಪರೀಕ್ಷೆಯಲ್ಲಿ ಸೈ ಎನಿಸಿಕೊಂಡಿದ್ದಾನೆ.
ನೀವೂ ರೈತ ಪ್ರಭಯ್ಯ ಬಸವಣ್ಣಯ್ಯ ಹಿರೇಮಠ ಅವರ ಕೃಷಿ ಬದುಕಿನ ಕಥೆ ಕೇಳಿ ಕೃಷಿಹೊಂಡ ನಿರ್ಮಿಸಿ ಮೊಬೈಲ್ ಸಂಖ್ಯೆ 9900299106.
Kshetra Samachara
17/09/2021 05:51 pm