ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : 10 ಗಂಟೆಯಲ್ಲಿ ಬರೋಬ್ಬರಿ 28 ಎಕರೆ ಹತ್ತಿ ಹೊಲ ಕುಂಟೆ ಹೊಡೆದ ಜೋಡೆತ್ತುಗಳು

ನವಲಗುಂದ : ತಾಲ್ಲೂಕಿನ ತಿರ್ಲಾಪುರ ಗ್ರಾಮದ ರಾಯಪ್ಪ ಭೀಮಪ್ಪ ಚವಡಿ ಎಂಬುವವರಿಗೆ ಸೇರಿದ ಎತ್ತುಗಳು ಕೇವಲ 10 ಗಂಟೆಯಲ್ಲಿ ಬರೋಬ್ಬರಿ 28 ಎಕರೆ ಹತ್ತಿ ಹೊಲವನ್ನು ಕುಂಟೆ ಹೊಡೆಯುವ ಮೂಲಕ ಗಮನ ಸೆಳೆದಿವೆ.

ಗುರುವಾರ ಗ್ರಾಮದ ಪರ್ವತ ಮಲ್ಲಿಕಾರ್ಜುನ ದೇವಸ್ಥಾನ ಹಾಗೂ ಶರಣ ಬಸವೇಶ್ವರ ದೇವಾನದ ಗೆಳೆಯರ ಬಳಗ ಕುಂಟಾಲ ಓಣಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ ಅದೇ ಗ್ರಾಮದ ವೀರಣ್ಣ ಕಲ್ಲೇದ ಎಂಬುವವರಿಗೆ ಸೇರಿದ ಹತ್ತಿ ಹೊಲದಲ್ಲಿ ಬೆಳಿಗ್ಗೆ ಏಳು ಗಂಟೆಗೆ ಆರಂಭವಾದ ಕುಂಟೆ ಹೊಡೆಯುವ ಕಾರ್ಯಕ್ರಮ ಸಂಜೆ ಐದು ಗಂಟೆಯವರೆಗೆ ನಡೆಯಿತು. ಜೋಡೆತ್ತುಗಳು ಒಂದೇ ದಿನ 28 ಎಕರೆ ಹತ್ತಿ ಹೊಲವನ್ನು ಕುಂಟೆ ಹೊಡೆಯುವ ಮೂಲಕ ಗ್ರಾಮಸ್ಥರ ಗಮನ ಸೆಳೆದವು.

Edited By :
Kshetra Samachara

Kshetra Samachara

16/09/2021 08:21 pm

Cinque Terre

20.74 K

Cinque Terre

0

ಸಂಬಂಧಿತ ಸುದ್ದಿ