ಕೃಷಿಯಲ್ಲಿ ಮಹಿಳೆಯರ ಪಾತ್ರ ಅನನ್ಯವಾಗಿದೆ. ಮಹಿಳೆಯರು ಜಮೀನಿನಲ್ಲಿ ಎಲ್ಲ ಕೆಲಸಗಳನ್ನೂ ಮಾಡುತ್ತಾರೆ. ಪುರುಷರಿಗೆ ಸಮನಾಗಿ ದುಡಿಯುವವರು ಬಹಳಷ್ಟಿದ್ದಾರೆ. ಆದರೆ ಹದಭರಿತವಾದ ಮಳೆಯಾಗದಿದ್ದರೆ ದುಡಿಯುವ ಕೈ ಖಾಲಿಯಾಗುತ್ತದೆ. ಉತ್ತಮ ಇಳುವರಿಯ ಬೆಳೆ ಬೆಳೆಯಬೇಕು ಎನ್ನುವ ಛಲದಿಂದ ಬಿತ್ತಿದ ಬೆಳೆ ಮಳೆಯಿಲ್ಲದೆ ಒಣಗುವುದು ಸಾಮಾನ್ಯವಾಗಿದೆ.
ಮಳೆರಾಯನ ಅವಕೃಪೆಯಿಂದ ಕಂಗೆಟ್ಟ ರೈತರಿಗೆ ಕೃಷಿ ಹೊಂಡಗಳನ್ನು ನಿರ್ಮಿಸಿಕೊಡುವುದರ ಮೂಲಕ ದೇಶಪಾಂಡೆ ಫೌಂಡೇಶನ್ ರೈತರಿಗೆ ಅನುಕೂಲವಾಗಿದೆ. ಮಳೆಯಿಲ್ಲದೆ ಬಿತ್ತಿದ ಬೆಳೆ ಬಾಡಿ ಹೋಗುವ ಸಂದರ್ಭದಲ್ಲಿ ಕೃಷಿಹೊಂಡದ ನೀರು ಬೆಳೆಯನ್ನು ನಳನಳಿಸುವಂತೆ ಮಾಡುತ್ತಿದೆ.
ಬನ್ನಿ ಇಂದಿನ ದೇಶ್ ಕೃಷಿ ಸಂಚಿಕೆಯಲ್ಲಿ ಹೊಂಡದ ನೀರು ಬಳಸಿಕೊಂಡು ಉತ್ತಮ ಬೆಳೆ ಬೆಳೆದ ರೈತ ಮಹಿಳೆಯ ಬಗ್ಗೆ ತಿಳಿಯೋಣ..
Kshetra Samachara
29/08/2021 05:17 pm