ಧಾರವಾಡ: ಕೇವಲ ಎಂಟು ಗಂಟೆಯಲ್ಲಿ ಜೋಡೆತ್ತುಗಳು 26 ಎಕರೆ ಹೊಲದಲ್ಲಿ ಎಡೆಕುಂಟೆ ಹೊಡೆದು ಗಮನ ಸೆಳೆದಿವೆ.
ಹೌದು! ನವಲಗುಂದ ತಾಲೂಕಿನ ಶಿರಕೋಳ ಗ್ರಾಮದ ರೈತ ಶಿವನಗೌಡ್ರ ಹಳೇಮನಿ ಎಂಬುವವರಿಗೆ ಸೇರಿದ ಜೋಡೆತ್ತುಗಳೇ ಈ ಸಾಧನೆ ಮಾಡಿ ಗಮನಸೆಳೆದಿವೆ.
ಕೇವಲ ಎರಡು ಎಡೆಕುಂಟೆಗಳನ್ನು ಮಾತ್ರ ಕಟ್ಟಲಾಗಿತ್ತು. ಒಂದೇ ಕಡೆ ಇರುವ 26 ಎಕರೆ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗಿದ್ದು, ಆ ಹತ್ತಿ ಬೆಳೆಯಲ್ಲಿ ಈ ಎತ್ತುಗಳು ಕೇವಲ ಎಂಟು ಗಂಟೆ ಸಮಯದಲ್ಲಿ ಎಡೆಕುಂಟೆ ಹೊಡೆದು ಪೂರ್ಣಗೊಳಿಸಿವೆ.
ಶಿವು ಹೂಲಿ ಹಾಗೂ ಮುತ್ತು ಹೂಲಿ ಎಂಬ ಇಬ್ಬರು ಮಾತ್ರ ಇಡೀ 26 ಎಕರೆ ಎಡೆಕುಂಟೆ ಹೊಡೆದಿದ್ದಾರೆ. ಎತ್ತುಗಳು ಜೋರಾಗಿ ಓಡಿದಂತೆಲ್ಲ ಅವುಗಳ ಹಿಂದೆ ಎಡೆಕುಂಟೆ ಹಿಡಿದು ಇವರಿಬ್ಬರೇ ಸಾಗಿದ್ದು ಇನ್ನೊಂದು ವಿಶೇಷ.
ಬೆಳಿಗ್ಗೆ 8 ಗಂಟೆಯಿಂದ ಎಡೆಕುಂಟೆ ಹೊಡೆಯಲು ಆರಂಭಿಸಲಾಯಿತು. ಸಂಜೆ 4 ಗಂಟೆಯಷ್ಟೊತ್ತಿಗೆ 26 ಎಕರೆ ಪ್ರದೇಶದಲ್ಲಿ ಎಡೆಕುಂಟೆ ಹೊಡೆದು ಪೂರ್ಣಗೊಳಿಸಲಾಗಿದೆ. ಎತ್ತುಗಳ ಹಾಗೂ ರೈತರ ಈ ಸಾಹಸ ನೋಡಲು ಜನ ಕೂಡ ಹೊಲಕ್ಕೆ ಧಾವಿಸಿದ್ದರು. ಅಲ್ಲದೇ ಕಹಳೆ ಊದಿ ಎತ್ತುಗಳನ್ನು ಹುರಿದುಂಬಿಸಲಾಗುತ್ತಿತ್ತು.
Kshetra Samachara
18/08/2021 05:59 pm