ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ: ಬೆಳೆ ಪರಿಹಾರಕ್ಕಾಗಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಕೆ.

ಅಳ್ನಾವರ: ಕಳೆದ ತಿಂಗಳು ಸುರಿದ ಭಾರಿ ಮಳೆಗೆ ತಾಲೂಕಿನಾದ್ಯಂತ ಸಾಕಷ್ಟು ಪ್ರಮಾಣದಲ್ಲಿ ಹಾನಿ ಉಂಟಾಗಿದ್ದು,ಅತಿ ವೃಷ್ಟಿ ಗೆ ತುತ್ತಾದ ಜನರಿಗೆ ಹಾಗೂ ರೈತಾಪಿ ವರ್ಗಕ್ಕೆ ಬೆಳೆ ಪರಿಹಾರ ಒದಗಿಸಿ ಕೊಡಬೇಕೆಂದು 'ಕರ್ನಾಟಕ ರಕ್ಷಣಾ ವೇದಿಕೆ' ವತಿಯಿಂದ ತಹಶೀಲ್ದಾರ್ 'ಅಮರೇಶ ಪಮ್ಮಾರ' ರವರಿಗೆ ಮನವಿ ಸಲ್ಲಿಸಲಾಯಿತು.

ಕಳೆದ ತಿಂಗಳು ಸುರಿದ ಅಕಾಲಿಕ ಮಳೆಗೆ ಕೆರೆಯ ಅಕ್ಕ ಪಕ್ಕದಲ್ಲಿದ್ದ ಜಮೀನಿಗೆ ನೀರು ಹೊಕ್ಕು ಬೆಳೆ ನಾಶವಾಗುವುದಲ್ಲದೆ,ನೀರಿನ ರಭಸಕ್ಕೆ ಬೆಳೆ ಬರುವ ಭೂಮಿ ಯಲ್ಲಿ ಕೊರೆತ ಉಂಟಾಗಿ ಹೊಲ,ಗದ್ದೆ ಗಳೆಲ್ಲವು ಹಾಳಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ತಾಲೂಕಿನಾದ್ಯಂತ ಬೆಳೆ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಒದಗಿಸಿ ಕೊಡಬೇಕು ಎಂದು ಕ.ರ.ವೇ ತಾಲೂಕಾಧ್ಯಕ್ಷ ಪ್ರಭು ಕುಂಬಾರ ಹೇಳಿದರು.

ತಾಲೂಕಿನ ರೈತರು ಕೃಷಿಯನ್ನೇ ಅವಲಂಭಿಸಿದ್ದು,ಪ್ರತಿ ವರ್ಷ ಮಳೆಯ ಕಾರಣ ಪದೇ ಪದೇ ಹಾನಿಗೊಳಗಾಗುತ್ತಿದ್ದು ಗಾಯದ ಮೇಲೆ ಬರೆ ಎಳದಂತೆ ಆಗುತ್ತಿದೆ.ಕೂಡಲೇ ಸಮೀಕ್ಷೆ ನಡೆಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು,ಇಲ್ಲವಾದಲ್ಲಿ ಕ.ರ.ವೇ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಕ.ರ.ವೇ ಪ್ರದಾನ ಕಾರ್ಯದರ್ಶಿ ಅಷ್ಪಾಕ ಮುಲ್ಲಾ ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದರು.

ಈ ಸಂದರ್ಭದಲ್ಲಿ ಹನಮಂತ ಸತ್ಯನ್ನವರ,ವಿಠಲ ಕುಂಬಾರ,ರುದ್ರೇಶ ಹವಳದ,ಸಂತೋಷ ಮಟ್ಟಿ ಕ.ರ.ವೇ ಸದಸ್ಯರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

09/08/2021 03:16 pm

Cinque Terre

15.41 K

Cinque Terre

0

ಸಂಬಂಧಿತ ಸುದ್ದಿ