ನವಲಗುಂದ : ಕಳಸಾ ಬಂಡೂರಿ ಮಹದಾಯಿ ತೀರ್ಪಿನಂತೆ ಇದುವರೆಗೆ ಕಾಮಗಾರಿ ಆರಂಭವಾಗಿಲ್ಲಾ, ತ್ವರಿತಗತಿಯಲ್ಲಿ ಕಾಮಗಾರಿ ಆರಂಭ ಮಾಡವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮಲಪ್ರಭಾ ಮಹದಾಯಿ ಕಳಸಾ ಬಂಡೂರಿ ರೈತ ಹೋರಾಟ ಒಕ್ಕೂಟ ಮತ್ತು ಪಕ್ಷಾತೀತ ರೈತ ಹೋರಾಟ ಸಮಿತಿ ವತಿಯಿಂದ ನವಲಗುಂದ ತಹಶೀಲ್ದಾರ್ ಅವರಿಗೆ ಮನವಿಯನ್ನು ನೀಡಲಾಯಿತು.
ಪಟ್ಟಣದ ರೈತ ಭವನದಲ್ಲಿ ಮನವಿ ಸಲ್ಲಿಸಿದ ಅವರು, ತ್ವರಿತಗತಿಯಲ್ಲಿ ಕಳಸಾ ಬಂಡೂರಿ ಮಹದಾಯಿ ಕಾಮಗಾರಿ ಆರಂಭ ಮಾಡವುದು, ಪ್ರಧಾನ ಮಂತ್ರಿ ಪರಿಹಾರ ನಿಧಿಯು ಶೇಕಡಾ 70 ರಷ್ಟು ರೈತರಿಗೆ ತಲುಪಿಲ್ಲಾ, ತಕ್ಷಣ ಬಿಡುಗಡೆ ಮಾಡಬೇಕು, ಕಳೆದ ವರ್ಷ ಆಗಸ್ಟ್ ನಲ್ಲಿ ಸುರಿದ ಬಾರಿ ಮಳೆಗೆ ರೈತರ ಬೆಳೆಗಳು ನಾಶವಾಗಿದ್ದವು ಅದಕ್ಕೆ ಪರಿಹಾರ ನೀಡೋದಾಗಿ ಸರಕಾರ ಮಾತು ನೀಡಿತ್ತು, ಅದು ಸಹ ಇದುವರೆಗೂ ಬಂದಿಲ್ಲಾ, ಪ್ರಮುಖವಾಗಿ ನವಲಗುಂದದಲ್ಲಿ ರೈತ ಕೃಷಿ ಸಂಪರ್ಕ ಕೇಂದ್ರ ಆರಂಭ ಮಾಡಬೇಕು ಎಂಬ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ರೈತರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸುಭಾಸ್ ಚಂದ್ರಗೌಡ ಪಾಟೀಲ್, ಬಸವನಗೌಡ ಫಕ್ಕಿರಗೌಡ, ಗೋವಿಂದ ರೆಡ್ಡಿ ಮೊರಬ, ಶಂಕರು ಸಂಗೇಟಿ, ಗಂಗಪ್ಪ ಸಂಗೇಟಿ, ಆರ್ ಆರ್ ಪಾಟೀಲ್, ಶಿವಪ್ಪ ಸಂಗೇಳ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Kshetra Samachara
23/02/2021 09:54 am