ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಬಾ ಗುರು ಕೃಷಿಯಲ್ಲಿ ಖುಷಿ ಕಾಣೋಣ..!

ನವಲಗುಂದ : ಧಾರವಾಡ ಜಿಲ್ಲೆಯ ಬಹುತೇಕ ಕೃಷಿ ಪ್ರದೇಶ ಮಳೆಯನ್ನೇ ಅವಲಂಬಿಸಿದೆ. ಮಳೆರಾಯ ಮುನಿಸಿಕೊಂಡ್ರೆ ಮುಗಿತು. ವರ್ಷಪೂರ್ತಿ ಸಂಕಷ್ಟಗಳ ಸುರಿಮಳೆ ಫಿಕ್ಸ್‌. ಆದ್ರೆ ಈಗ ಹಾಗಲ್ಲ ನೋಡಿ ಮಳೆಯಾಗದಿದ್ದರೂ ಒಂದಲ್ಲ, ಎರಡಲ್ಲ ಮೂರು ಬೆಳೆ ತೆಗೆಯುತ್ತೇವೆ. ಇನ್ನೇನು ಬೇಕ್ರಿ ಕೃಷಿಯಲ್ಲಿ ಖುಷಿ ಕಾಣಲು. ಅದಕ್ಕೆ ನಾನು ಯುವಕರನ್ನು 'ಬಾ ಗುರು ಕೃಷಿಯಲ್ಲಿ ಖುಷಿ ಕಾಣೋಣ' ಎಂದು ಕರೆಯುತ್ತಿರುವುದು.

ಹೀಗೆ ಹೇಳಿದ್ದು ಡಿಎಡ್‌, ಬಿಎ ವ್ಯಾಸಂಗ ಮಾಡಿರುವ ಪುಂಡಪ್ಪ ಹುಚ್ಚಪ್ಪ ಕುಂಬಾರ. ಪುಂಡಪ್ಪ ಅವರು ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಕಡದಳ್ಳಿ ಗ್ರಾಮದ ಪ್ರಗತಿಪರ ರೈತ. ಮಳೆಯನ್ನೇ ಅವಲಂಬಿಸಿ ಕೃಷಿ ಮಾಡುವುದು ಕಷ್ಟವೇ ಸರಿ. ಹೀಗಾಗಿ ದೇಶಪಾಂಡೆ ಫೌಂಡೇಶನ್ ಸಹಾಯ ಪಡೆದು ಕೃಷಿ ಹೊಂಡ ನಿರ್ಮಿಸಿದ ಪುಂಡಪ್ಪ ಅವರು ತಮ್ಮ ಆದಾಯವನ್ನು ದ್ವಿಗುಣಗೊಳಿಸಿದ್ದಾರೆ. ಅಷ್ಟೇ ಅಲ್ಲದೆ ಮುಂದಿನ ದಿನಗಳಲ್ಲಿ ಅರಣ್ಯ ಕೃಷಿ, ತೋಟಗಾರಿಕೆ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

ಕೃಷಿ ಹೊಂಡ ನಿರ್ಮಾಣಕ್ಕೂ ಮುನ್ನ 70ರಿಂದ 80 ಸಾವಿರ ಆದಾಯ ಪಡೆಯುತ್ತಿದ್ದ ಪುಂಡಪ್ಪ ಅವರು ಸದ್ಯ ಎರಡು ಲಕ್ಷ ರೂಪಾಯಿಗೂ ಅಧಿಕ ಆದಾಯ ಪಡೆಯುತ್ತಿದ್ದಾರೆ. ಅವರ ಆದಾಯ ದ್ವಿಗುಣಕ್ಕೆ ದೇಶಪಾಂಡೆ ಫೌಂಡೇಶನ್ ಗಮನಾರ್ಹ ಕೊಡುಗೆ ನೀಡಿದೆ. ಅಷ್ಟೇ ಅಲ್ಲದೆ ಸಕಾಲಕ್ಕೆ ಸಲಹೆ, ಸಹಕಾರ ನೀಡಿದೆ. ಜೊತೆಗೆ ಫಾರ್ಮರ್ ಪ್ರೊಡಕ್ಷನ್ ಆರ್ಗನೈಜೇಶನ್‌ನ ಕಲ್ಮೇಶ್ವರ ಸಂಘದ ಲಾಭ ಪಡೆದ ಪುಂಡಪ್ಪ ಅವರು, ಇದರ ಬಗ್ಗೆ ಇತರ ರೈತರಿಗೂ ಜಾಗೃತಿ ಮೂಡಿಸ್ತಿದ್ದಾರೆ.

ನಾವು ಅಷ್ಟೇ ಅಲ್ಲ ನಮ್ಮೂರು ಕಡದಳ್ಳಿಯ ನೂರಾರು ರೈತರು ತಮ್ಮ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಿದ್ದಾರೆ. ಈ ಮೂಲಕ ವರ್ಷಪೂರ್ತಿ ನಮ್ಮ ಗ್ರಾಮದಲ್ಲಿ ಕೃಷಿ ಚಟುವಟಿಕೆ ನಡೆಯುತ್ತಲೇ ಇರುತ್ತದೆ ಎನ್ನುತ್ತಾರೆ ಪುಂಡಪ್ಪ ಅವರು.

ಪ್ರಗತಿಪರ ರೈತ ಪುಂಡಪ್ಪ ಅವರು ಇಂದು ಅನೇಕ ಯುವಕರಿಗೆ ಮಾದರಿಯಾಗಿದ್ದು, ಮಾರ್ಗದರ್ಶನ ಮಾಡುತ್ತಿದ್ದಾರೆ. ಕೃಷಿಯಲ್ಲಿನ ಅವರ ಖುಷಿ ಮತ್ತಷ್ಟು ಹೆಚ್ಚಲಿ...

Edited By : Manjunath H D
Kshetra Samachara

Kshetra Samachara

22/02/2021 09:13 pm

Cinque Terre

65.57 K

Cinque Terre

1

ಸಂಬಂಧಿತ ಸುದ್ದಿ