ನವಲಗುಂದ: ''ಅನ್ನದಾತೋ ಸುಖೀಭವ'' ಎನ್ನುವ ದೇಶ ನಮ್ಮದು, ಕೃಷಿ ಜಗತ್ತಿನ ಜೀವರಾಶಿಗಳನ್ನು ಬದುಕಿಸುವ ಅಕ್ಷಯ ಪಾತ್ರೆ ಈ ಅಕ್ಷಯ ಪಾತ್ರೆಯ ಒಡೆಯ ರೈತ. ಅದಕ್ಕಾಗಿ ಆತನಿಗೆ ಅನ್ನದಾತ ಎಂಬ ಹೆಗ್ಗಳಿಕೆಯಿದೆ.ಆದರೆ ಅನಿಶ್ಚಿತ ಮಳೆ, ನೀರಿನ ಕೊರತೆ, ಬೆಳೆಗೆ ಸಿಗದ ಸರಿಯಾದ ಬೆಲೆ, ನೆರವಿಗೆ ಬಾರದ ಸರಕಾರಗಳು, ಅಸಮರ್ಪಕ ಸಾಲ ವ್ಯವಸ್ಥೆ, ಕೃಷಿ ಕಾರ್ಮಿಕರ ಕೊರತೆ, ಸೇರಿದಂತೆ ರೈತರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ತತ್ತರಿಸಿ ಹೋಗುತ್ತಿದ್ದಾರೆ.
ದೇಶಪಾಂಡೆ ಫೌಂಡೇಶನ್ ರೈತರ ಬಾಳಿಗೆ ಬೆಳಕಾಗಿ, ಅನ್ನದಾತನ ಬದುಕು ಹಸನಾಗಿಸಲು ಟೊಂಕ ಕಟ್ಟಿ ನಿಂತಿದೆ. ಈ ಹಿನ್ನೆಲೆಯಲ್ಲಿ ಹದವರಿತ ನೀರೊಂದಿದ್ದರೆ ಬಂಜರು ಭೂಮಿಯಲ್ಲಿಯೂ ಬಂಗಾರ ಬೆಳೆಯುವ ಶಕ್ತಿ ಇರುವ ನಮ್ಮ ರೈತರಿಗೆ ಸೂಕ್ತ ಸಾಥ್ ನೀಡುತ್ತಿದೆ
ನವಲಗುಂದ ತಾಲೂಕಿನ ತಿರ್ಲಾಪುರದ 40 ವರ್ಷದ ರೈತ ಸಂಜೀವ ರೆಡ್ಡಿ ನವಲಗುಂದ ಇವರು ಬಿ.ಎ ಪದವಿ ಪೂರೈಸಿ ತಮ್ಮ 10 ಎಕರೆ ಮಳೆಯಾಶ್ರಿತ ಭೂಮಿಯನ್ನು ನಂಬಿ ಕೃಷಿ ಮಾಡಲು ಮುಂದಾಗಿದ್ದರು. ಸರಿಯಾದ ಮಳೆಯಾಗದ ಹಿನ್ನೆಲಯಲ್ಲಿ ಕಂಗಾಲಾದ ರೈತನಿಗೆ ದೇಶಪಾಂಡೆ ಫೌಂಡೇಶನ್ ರೈತನ ಹೊಲದಲ್ಲಿ 100 ಅಡಿ ಉದ್ದ,100 ಅಡಿ ಅಗಲ,10 ಅಡಿ ಆಳದ ಕೃಷಿ ಹೊಂಡ ನಿರ್ಮಿಸಿಕೊಡುವ ಮೂಲಕ ಪ್ರೋತ್ಸಾಹ ನೀಡಿದೆ.
ಕೃಷಿ ಹೊಂಡ ಪೂರ್ವದಲ್ಲಿ ಹೆಸರು,ಕಡಲೆ, ಗೋಧಿ ಬೆಳೆಯುವ ಮೂಲಕ 70 ರಿಂದ 80 ಸಾವಿರ ಆದಾಯಗಳಿಸುತ್ತಿದ್ದ ರೈತ ಕೃಷಿ ಹೊಂಡ ನಿರ್ಮಾಣದ ಬಳಿಕ ವಾಣಿಜ್ಯ ಬೆಳೆ ಹತ್ತಿ,ಮಕ್ಕೆಜೋಳ,ಕಡಲೆ,ಗೋಧಿ,ಜೋಳ,ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆ ಬೆಳೆಯುವ ಮೂಲಕ ವಾರ್ಷಿಕ ಅದೇ ಭೂಮಿಯಲ್ಲಿ 4 ಲಕ್ಷದವರೆಗೆ ಆದಾಯಗಳಿಸುತ್ತಿದ್ದಾರೆ.
ಕಷ್ಟದಲ್ಲಿರುವ ರೈತರಿಗೆ ಅನುಕಂಪದ ಬದಲು ಸೂಕ್ತ ಸಹಕಾರ ನೀಡುವ ಮೂಲಕ ರೈತರಿಗೆ ಛಲ ತುಂಬುತ್ತಿರು ದೇಶಪಾಂಡೆ ಫೌಂಡೇಶನ್ ಯುವ ಪಿಳಿಗೆಗೂ ಕೃಪಿಯತ್ತ ಒಲವು ಮೂಡುವಂತೆ ಮಾಡಿದೆ.
Kshetra Samachara
21/02/2021 09:46 pm