ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿತ್ಯ ಮಣ್ಣಲ್ಲೇ ಚಿನ್ನ ಕಂಡ ರೈತಾಪಿ ಬದುಕಿನ ಸುಗ್ಗಿಯ ಕಾಲ ಹಬ್ಬವೇ ಸರಿ

ಇದೀಗ ಎಲ್ಲೆಡೆ ರೈತಾಪಿ ವರ್ಗದ ಸುಗ್ಗಿಯ ಕಾಲ. ಈ ಸುಗ್ಗಿಯ ಕಾಲದಲ್ಲಿ ರೈತರ ಸಂಭ್ರಮ ದುಪ್ಪಟ್ಟು ಎಂದರೆ ಎಂದರೆ ತಪ್ಪಾಗಲಾರದು.

ಹೌದು ! ಕಷ್ಟ ಪಟ್ಟು ಉತ್ತಿ ಬಿತ್ತಿದ ಬೆಳೆಗಳನ್ನು ಒಕ್ಕಲು ಮಾಡಿ ದುಡಿಮೆಯ ಪ್ರತಿಫಲ ಪಡೆಯುವ ಈ ಹಳ್ಳಿಗಳಲ್ಲಿ ಕಣ ಕಟ್ಟೆಯ ಸಂಭ್ರಮ ಹಿಗ್ಗಿನ ಸಂಭ್ರಮ ಹಬ್ಬವೇ ಸರಿ.

ಮಳೆ, ಗಾಳಿ, ಚಳಿ, ಬಿಸಿಲಿಗೆ ಕುಗ್ಗದೆ, ಅಂಜದೆ, ಅಳುಕದೆ ಜಗತ್ತಿಗೆ ಒಳಿತು ಬಯಸಿ ಅನ್ನ ನೀಡುವ ಈ ರೈತ ಮಣ್ಣಲ್ಲೇ ಚಿನ್ನ ಕಂಡು ನೆಮ್ಮದಿ ಪಡೆದವ.

ತಲೆಗೆ ಟವೆಲ್ ಸುತ್ತಿಕೊಂಡು ಉಟ್ಟ ಅರಿವೆಯ ಮೇಲೆ, ಸ್ವಾರ್ಥವಿಲ್ಲದೆ ದುಡಿದು ತನ್ನ ನಿತ್ಯ ಕರ್ಮದಲ್ಲಿ ಮಗ್ನನಾಗಿ ಅನ್ನ ಬೆಳೆದು ಜಗತ್ತಿಗೆ ನೀಡಬಲ್ಲ ಏಕೈಕ ಜೀವಿ‌ ಎಂದರೆ ಅದು ರೈತ ಮಾತ್ರ. ಆತನಿಗೆ ಸಾಥಿಯಾದ ಜಾನುವಾರುಗಳು ಶ್ರೇಷ್ಠವೇ ಸರಿ.

ಅಂದ ಹಾಗೇ ಈ ಎಲ್ಲ ರೈತಾಪಿ ಬದುಕಿನ ಚಿತ್ರಗಳನ್ನು ಸೆರೆ ಹಿಡಿದಿದ್ದು ಕಲಘಟಗಿ ಸುತ್ತ ಮುತ್ತಲಿನ ಮಿಶ್ರಿಕೋಟಿ, ಉಗ್ಗಿನಕೆರೆ ಹಾಗೂ ದೂಳಿಕೊಪ್ಪ ಗೋಕುಲ ಗ್ರಾಮಗಳಲ್ಲಿ.

ರೈತರು ತಮ್ಮ ತಮ್ಮ ಹೊಲಗಳಲ್ಲಿ ಜೋಳದ ಕಟಾವು, ಕಡಲೆ, ಗೋಧಿ ಸೇರಿದಂತೆ ವಿವಿಧ ಬೆಳೆಗಳ ಸಂಸ್ಕರಣೆ ಹಾಗೂ ರಾಶಿ ಮಾಡುವುದು.

ಕಡಲೆ ಕೀಳುವುದು ಮತ್ತು ಬಣವಿ ಹಾಕುತ್ತಿರುವುದು, ಜೋಳ ಕಟಾವು, ಕಡಲೆ ಕೊಯ್ಲು, ಎತ್ತು, ಎಮ್ಮೆ, ಆಕಳು ಮೈ ತೊಳೆಯುತ್ತಿರುವ ಚಿತ್ರಗಳು ಎಲ್ಲರ ಗಮನ ಸೆಳೆಯುವಂತಿದ್ದು ಮತ್ತೆ ಹಳ್ಳಿ ಕಡೆ ನಮ್ಮ ನಿಮ್ಮೆಲ್ಲರ ಪಯಣ ಆರಂಭಿಸುವಂತಿವೆ.

ಅಂದಹಾಗೆ ಈ ಎಲ್ಲ ರೈತಾಪಿ ಚಟುವಟಿಕೆಯ ಚಿತ್ರಗಳನ್ನು ಸೆರೆ ಹಿಡಿದಿದ್ದು ಹವ್ಯಾಸಿ ಛಾಯಾಗ್ರಹಕ ಈರಪ್ಪ ನಾಯ್ಕರ.

Edited By : Nagesh Gaonkar
Kshetra Samachara

Kshetra Samachara

21/02/2021 06:39 pm

Cinque Terre

38.83 K

Cinque Terre

2

ಸಂಬಂಧಿತ ಸುದ್ದಿ