ಧಾರವಾಡ : ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ರವಿಕುಮಾರ ಸುರಪುರ ಹಾಗೂ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಇಂದು ತೋಟಗಾರಿಕೆ ಇಲಾಖೆಯಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್ 2020-21 ನೇ ಸಾಲಿನ ಯೋಜನೆಯಡಿ ನೀಡಿರುವ ಅನುದಾನದಲ್ಲಿ ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣವಾಗಿರುವ ಇನಪ್ರಾ ಪೈನ್ ಪುಡ್ಸ್ ಕೈಗಾರಿಕೆಯ ಮಾವು ಸಂಸ್ಕರಣ ಹಾಗೂ ಶೀತಲಗೃಹ ಘಟಕಕ್ಕೆ ಭೇಟಿ ನೀಡಿದರು.
ಉತ್ತರ ಕರ್ನಾಟಕದಲ್ಲಿ ಅತ್ಯಂತ ದೊಡ್ಡ ಮಾವು ಸಂಸ್ಕರಣ ಹಾಗೂ ಶೀತಲಗೃಹವಾಗಿರುವ ಈ ಕೈಗಾರಿಕೆಗೆ ಬಹು ಜಿಲ್ಲೆಗಳಿಂದ ಮಾವು ಪೂರೈಕೆ ಆಗಲಿದೆ.
ಮಾವು ಸೀಜನ್ ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಜಿಲ್ಲಾಧಿಕಾರಿಗಳು ಇಂದು ಭೇಟಿ ನೀಡಿ, ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಅಧಿಕಾರಿಗಳು ಫಲಾನುಭವಿ ರೈತರು, ಕೈಗಾರಿಕಾ ಉದ್ಯಮಿಗಳು ಉಪಸ್ಥಿತರಿದ್ದರು.
Kshetra Samachara
15/02/2021 12:59 pm