ನವಲಗುಂದ: ಸಕಾಲಕ್ಕೆ ಮಳೆ ಬಾರದೆ ರೈತರ ಜೀವನ ನಿರ್ವಹಣೆ ಭಾರೀ ಕಷ್ಟವಾಗುತ್ತಿದೆ. ಬೆಳೆ ಹಂಗಾಮಿನಲ್ಲಿ ಹೆಚ್ಚುತ್ತಿರುವ ಬರದಿಂದಾಗಿ ಮಳೆಯಾಶ್ರಿತ ಕೃಷಿಯು ಅನಿಶ್ಚಿತವಾಗಿದೆ. ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿ, ಮಳೆ ಪ್ರಮಾಣದ ಏರಿಳಿತಗಳ ಅರಿವು ರೈತ ಸಮುದಾಯಕ್ಕೆ ಇಲ್ಲದಿರುವುದರಿಂದ ಆರ್ಥಿಕನಷ್ಟವಾಗುತ್ತಿದೆ. ಇದನ್ನು ಗಮದಲ್ಲಿಟ್ಟುಕೊಂಡು ದೇಶಪಾಂಡೆ ಫೌಂಡೇಶನ್ ಕೃಷಿ ಹೊಂಡಗಳನ್ನು ನಿರ್ಮಿಸಿ ರೈತರ ನೆರವಿಗೆ ನಿಂತಿದೆ.
ಈ ಸಹಾಯವನ್ನು ಪಡೆದ ಧಾರವಾಡ ಜಿಲ್ಲೆ ನವಲಗುಂದ ತಾಲೂಕು ತಿರ್ಲಾಪುರ ಗ್ರಾಮದ ರೈತ ಕೃಷ್ಣರೆಡ್ಡಿ ಈರಡ್ಡಿ ಅವರು ತಮ್ಮ ಆದಾಯವನ್ನು ದ್ವಿಗುಣ ಪಡೆಸಿಕೊಂಡಿದ್ದಾರೆ. ಬಿಎಸ್‌ಸಿ ಪದವೀಧರರಾಗಿರುವ ಕೃಷ್ಣರೆಡ್ಡಿ ಅವರು ಕೃಷಿಯಲ್ಲಿ ಸಾಧನೆ ಮಾಡಲು ಒಕ್ಕಲುತನ ಆರಂಭಿಸಿದರು. ಆದರೆ ಸಕಾಲಕ್ಕೆ ಮಳೆಯಾಗದೆ ನಷ್ಟ ಅನುಭವಿಸಿದರು. ಈ ವೇಳೆ ಅವರ ನೆರವಿಗೆ ನಿಂತಿದ್ದು ದೇಶಪಾಂಡೆ ಫೌಂಡೇಶನ್.
ಮಳೆಯಾಶ್ರಿತ ಜಮೀನಿನಲ್ಲಿ ಕೃಷಿಹೊಂಡ ನಿರ್ಮಿಸಿಕೊಂಡ ಕೃಷ್ಣರೆಡ್ಡಿ ಅವರಿಗೆ ಹೆಚ್ಚಿನ ಅನುಕೂಲವಾಗಿದೆ. ಮಣ್ಣು ಮತ್ತು ನೀರಿನ ಸಂರಕ್ಷಣೆಯ ದೃಷ್ಟಿಯಿಂದ ಕೃಷಿಹೊಂಡವು ಅವರ ಪಾಲಿಗೆ ವರದಾನವಾಗಿದೆ. ಇದರೊಂದಿಗೆ ಅವರ ಆದಾಯವೂ ಏರಿಕೆಯಾಗಿದೆ. ಈ ಬಗ್ಗೆ ಕೃಷ್ಣರೆಡ್ಡಿ ಏನು ಹೇಳುತ್ತಾರೆ ಅಂತ ನೀವೇ ಕೇಳಿ ನೋಡಿ....
ಕೃಷಿ ಹೊಂಡ ಅಷ್ಟೇ ಅಲ್ಲದೆ ರೈತರಿಗೆ ಸಲಹೆ ಸಹಕಾರ ನೀಡುವ ಕೆಲಸವನ್ನು ದೇಶಪಾಂಡೆ ಫೌಂಡೇಶನ್ ಮಾಡುತ್ತಿದೆ. ಇತ್ತ ಕೃಷ್ಣರೆಡ್ಡಿ ಅವರು ಮುಂದಿನ ದಿನಗಳಲ್ಲಿ ತೋಟಗಾರಿಕಾ ಬೆಳೆ, ಅರಣ್ಯಕೃಷಿ ಕಡೆಗೆ ಗಮನಹರಿಸುತ್ತಿದ್ದಾರೆ.
ಕೃಷಿಯಲ್ಲಿ ಸಾಧನೆ ಮಾಡಲು ಮುಂದಾಗಿರುವ ಬಿಎಸ್‌ಸಿ ಪದವೀಧರ ಕೃಷ್ಣರೆಡ್ಡಿ ಅವರಿಗೆ ದೇಶಪಾಂಡೆ ಫೌಂಡೇಶನ್ ಸಹಾಯ, ಸಹಕಾರ ನೀಡುತ್ತಿದೆ. 'ನಂಬಿ ಕೆಟ್ಟವರಿಲ್ಲವೋ ಮಣ್ಣನ್ನು' ಎಂದು ದಾಸವಾಣಿ ಹೇಳುತ್ತದೆ. ಹೀಗೆ ಚಲ ಬಿಡದೆ ದುಡಿಯುತ್ತಿರುವ ಕೃಷ್ಣರೆಡ್ಡಿ ಅವರು ಅನೇಕರಿಗೆ ಮಾದರಿಯಾಗಿದ್ದಾರೆ.
Kshetra Samachara
11/02/2021 09:01 pm