ಕುಂದಗೋಳ : ಕೊರೊನಾ ಹಾಗೂ ಜಾನುವಾರಿಗೆ ತಗುಲಿದ ಲಂಪಿ ಸ್ಕೀನ್ ರೋಗದ ಪರಿಣಾಮ ಬಂದ್ ಆಗಿದ್ದ ಕುಂದಗೋಳ ಮತಕ್ಷೇತ್ರದ ನೂಲ್ವಿಯ ಜಾನುವಾರುಗಳ ಮಾರುಕಟ್ಟೆ ಮತ್ತೆ ಎಂದಿನಂತೆ ಹೊಸ ಕಳೆ ತೆಳೆದಿದ್ದು ಮಾರುಕಟ್ಟೆಗೆ ರೈತರ ಆಗಮನ ಹೆಚ್ಚಿದೆ.
ಕುಂದಗೋಳ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಈಗಾಗಲೇ ಜಾನುವಾರುಗಳ ಕಾಯಕದ ಕೃಷಿ ಹಂಗಾಮ ಮುಕ್ತಾಯ ಕಂಡಿದ್ದು, ಜಾನುವಾರು ಮಾರಾಟಗಾರರ ಸಂಖ್ಯೆ ಅಧಿಕವಾಗಿ ಕಂಡು ಬರುತ್ತಿದೆ.
ಉತ್ತಮ ಜಾನುವಾರುಗಳ ಜೋಡಿಗಳು ಒಂದು ಲಕ್ಷದಿಂದ ಒಂದು ಲಕ್ಷ ಐವತ್ತು ಸಾವಿರದ ವರೆಗೆ ಬೇಡಿಕೆ ಪಡೆದಿದ್ದು, ಮುಂಬುರುವ ಉಳವಿ ಚನ್ನಬಸವೇಶ್ವರ ಜಾತ್ರೆ, ಸವದತ್ತಿ ಯಲ್ಲಮ್ಮನ ಜಾತ್ರೆ, ಮೈಲಾರಲಿಂಗೇಶ್ವರ ಜಾತ್ರೆಗೆ ಬಂಡಿ ಹಿಡಿಯುವ ರೈತಾಪಿ ಕುಟುಂಬದವರು ಪೇಟೆ ಎಡೆಗೆ ವಾಲಿದ್ದು ಉತ್ತಮ ಸದೃಡ ಕಾಯದ ಜಾನುವಾರು ಖರೀದಿಗೆ ಮುಗಿಬಿದ್ದಿದ್ದಾರೆ.
ಇಂದು ಬೆಳಿಗ್ಗೆಯೇ ಆರಂಭವಾದ ಜಾನುವಾರುಗಳ ಪೇಟೆಯಲ್ಲಿ ಐನೂರಕ್ಕೂ ಹೆಚ್ಚು ಜಾನುವಾರು ಜೋಡಿಗಳು ಪೇಟೆಗೆ ಧಾವಿಸಿವೆ, ಬಯಲು ಸೀಮೆ ರೈತರಲ್ಲಿ ಜಾನುವಾರು ಖರೀದಿ ಬದಲಾಗಿ ಮಾರಾಟಗಾರರೇ ಅಪಾರವಾಗಿ ಕಂಡು ಬರುತ್ತಿದ್ದಾರೆ.
ಕೇವಲ ಎತ್ತು ಹೋರಿಗಳಷ್ಟೇ ಅಲ್ಲದೇ ಆಕಳು, ಎಮ್ಮೆ, ಕುರಿ, ಮೇಕೆ ಮಾರಾಟವು ಸಹ ಆರಂಭವಾಗಿದ್ದು ಗದಗ, ಹುಬ್ಬಳ್ಳಿ, ಹಾವೇರಿ, ಶಿಗ್ಗಾಂವಿ, ಲಕ್ಷ್ಮೇಶ್ವರದಿಂದ ರೈತರು ಆಗಮಿಸಿ ಜಾನುವಾರುಗಳ ಖರೀದಿಯಲ್ಲಿ ತೊಡಗಿದ್ದಾರೆ.
Kshetra Samachara
05/02/2021 12:25 pm