ಕುಂದಗೋಳ : ರೈತರು ಈಗಾಗಲೇ ರೈತ ಸಂಪರ್ಕ ಕೇಂದ್ರದಲ್ಲಿ ಹಿಂಗಾರು ಬಿತ್ತನೆಯ ಗೋಧಿ, ಕಡಲೆ, ಕುಸುಬೆ, ಜೋಳ ಬೀಜ ಪಡೆದು ಭೂಮಿಯಲ್ಲಿ ಬಿತ್ತನೆ ಮಾಡಿದ್ದಿರಾ, ಭೂಮಿಯೂ ಅತಿವೃಷ್ಟಿ ಪರಿಣಾಮ ಅತಿ ಹೆಚ್ಚು ನೀರಿನಾಂಶ ಹೊಂದಿದ್ದು ಹಿಂಗಾರು ಬೆಳೆಗಳಿಗೆ ಪೂರಕವಾಗಲಿದೆ.
ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ನಾವು ಬೆಳೆ ಪರಿಶೀಲನೆಗೆ ಬಂದಿದ್ದೇವೆ, ರೈತರು ಕೃಷಿ ಕ್ಷೇತ್ರ ಬಲಿಷ್ಠ ಮಾಡಲು ರೈತ ಸಂಪರ್ಕ ಕೇಂದ್ರಕ್ಕೆ ರೈತರು ಭೇಟಿ ನೀಡಿ ಅಲ್ಲಿನ ಸೌಲಭ್ಯ ಪಡೆಯಿರಿ ನಾವು ಪ್ರತಿ ಕೆಟಗರಿಯವರಿಗೂ ಸರ್ಕಾರದ ಆದೇಶದ ಅನುಸಾರ ಸಹಾಯ ಮಾಡುತ್ತೆವೆ, ರೈತರು ಕೃಷಿ ಬಗ್ಗೆ ಕಾಳಜಿ ವಹಿಸಿರಿ ಎಂದು ಕೃಷಿ ಅಧಿಕಾರಿ ಅಂಬಿಕಾ ಮಹೇಂದ್ರಕರ ಹೇಳಿದರು.
ಅವರು ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿಯಲ್ಲಿ ಗುಡೇನಕಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದರು.
ಆತ್ಮಯೋಜನೆ ಅಧಿಕಾರಿ ಶ್ರೀದೇವಿ ಆಲೂರಿ ಹಿಂಗಾರು ಬೆಳೆ ಹಾಗೂ ರೈತರನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಗುಡೇನಕಟ್ಟಿ ಗ್ರಾಮ ರೈತ ಮುಖಂಡ ಬಸವರಾಜ ಯೋಗಪ್ಪನವರ, ಹಣುಮಂತ ಸಿದ್ದೂನವರ, ಶಿವಾನಂದ ಕಳಸಣ್ಣನವರ, ಯಲ್ಲಪ್ಪ ಸತ್ಯಣ್ಣನವರ ಉಪಸ್ಥಿತರಿದ್ದರು.
Kshetra Samachara
07/01/2021 06:58 pm