ಹುಬ್ಬಳ್ಳಿ: ಹೈಟೆನ್ಸನ್ ವಾಯರ್ ನಿಂದ ರೈತರು ಜೀವನ ಕೈಯಲ್ಲಿ ಹಿಡಿದು ಕೃಷಿ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
ಹೌದು. ಕಲಘಟಗಿ ತಾಲೂಕಿನ ತುಮರಿಕೊಪ್ಪ ಹಾಗೂ ಸುತ್ತಮುತ್ತನ ಗ್ರಾಮದ ರೈತರ ಜಮೀನಿನಲ್ಲಿ 110 ಕೆವಿ ವಿದ್ಯುತ್ ತಂತಿ ಹರಿದು ಹೋಗಿದೆ. ಆದ್ರೆ ಈ ವಿದ್ಯುತ್ ವಾಯರ್ ಗಳು ನೆಲಕ್ಕೆ ತಾಗುವ ಸ್ಥಿತಿಯಲ್ಲಿ ಇವೆ. ಇದರಿಂದ ರೈತರು ಜಮೀನಿನಲ್ಲಿ ಕೃಷಿ ಮಾಡದ ಸ್ಥಿತಿ ನಿರ್ಮಾಣವಾಗಿದೆ.
ರೈತರಿಗೆ ಕರೆಂಟ್ ಶಾಕ್ ಹೊಡೆಯುವ ಭಯ ಕಾಡುತ್ತಿದೆ. ಇದರಿಂದ ಆತಂಕಗೊಂಡ ರೈತರು ಕೆಪಿಟಿಎಸ್ ಸಿಬ್ಬಂದಿಗೆ ವಾಯರ್ ಗಳನ್ನು ಮೇಲಕ್ಕೆ ಎತ್ತುವಂತೆ ಹಲವು ಬಾರಿ ಮನವಿ ಮಾಡಿದ್ದಾರೆ. ಆದ್ರೂ ಇದುವರೆಗೂ ವಾಯರ್ ಗಳನ್ನು ಮೇಲಕ್ಕೆತ್ತುವ ಕೆಲಸವಾಗಿಲ್ಲ. ಹೀಗಾಗಿ ಕೂಡಲೇ ವಾಯರ್ ಮೇಲಕ್ಕೆ ಎತ್ತುವಂತೆ ಆಗ್ರಹಿಸಿದ್ದಾರೆ. ಯಾವುದಾದರೂ ಅನಾಹುತ ಸಂಭವಿಸಿದರೆ ನೇರವಾಗಿ ಕೆ.ಪಿ.ಟಿ.ಸಿ.ಎಲ್ ಸಿಬ್ಬಂದಿ ಹೊಣೆಯಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
Kshetra Samachara
05/01/2021 04:38 pm