ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಹುಲ್ ಹುಲ್ ಗೋ ಸುಲಬ್ರಗೋ ರೈತರ ಸೀಗೆ ಹುಣ್ಣಿಮೆ ಸಂಭ್ರಮ ಜೋರು

ಕುಂದಗೋಳ : ಮುಂಗಾರಿನ ಬೆಳೆಯನ್ನು ಕೈಗೆ ನೀಡಿ ಹಿಂಗಾರಿಗೆ ಹಸನಾದ ಭೂತಾಯಿ ಮಡಿಲಿಗೆ ಊಡಿ ತುಂಬುವ ಹಬ್ಬವೇ ಈ ಸೀಗೆ ಹುಣ್ಣಿಮೆ ಇಂದು ಈ ಹಬ್ಬದ ಅಂಗವಾಗಿ ಕುಂದಗೋಳ ತಾಲೂಕಿನ ರೈತಾಪಿ ಜನರು ಸಡಗರ ಸಂಭ್ರಮದಲ್ಲಿ ರೊಟ್ಟಿ ಬುತ್ತಿ ಕಟ್ಟಿಕೊಂಡು ಹೊಲಗಳಿಗೆ ತೆರಳುವ ದೃಶ್ಯ ನಿಜಕ್ಕೂ ಅತ್ಯದ್ಬುತ.

ಟ್ರ್ಯಾಕ್ಟರ್, ಚಕ್ಕಡಿ ಸೇರಿದಂತೆ ವಿವಿಧ ವಾಹನಗಳನ್ನು ತೆಗೆದುಕೊಂಡು ಹೊಲಕ್ಕೆ ಬಂದ ರೈತರು ಬನ್ನಿ ಮರಕ್ಕೆ ನೂಲು ಸಮರ್ಪಿಸಿ ವಿವಿಧ ಬಗೆಯ ಅಡುಗೆಗಳಿಂದ ಭೂತಾಯಿಯ ಒಡಲು ತುಂಬಿ ಹುಲ್ ಹುಲ್ ಗೋ ಸುಲಬ್ರಡೋ ಎಂದು ಚರಗ ಚೆಲ್ಲಿ ಹಬ್ಬ ಆಚರಿಸುತ್ತಿದ್ದಾರೆ.

ನಿನ್ನೆ ಕುಂದಗೋಳ ತಾಲೂಕಿನ ಅರ್ಧ ಹಳ್ಳಿಯ ಜನ ಸೀಗೆ ಹುಣ್ಣಿಮೆ ಆಚರಿಸಿದ್ರೇ ಕೆಲವರು ಇಂದು ಸೀಗೆ ಹುಣ್ಣಿಮೆ ಆಚರಣೆ ಮಾಡುತ್ತಿದ್ದು ಅತಿವೃಷ್ಟಿ ನಡುವೆಯೂ ಭೂತಾಯಿ ಇಷ್ಟಾರ್ಥ ನೆರವೇರಿಸುವ ಪೂಜೆಗೆ ರೈತಾಪಿ ಜನರು ಯಾವುದೇ ಕೊರತೆ ಮಾಡದೆ ಇಡೀ ಕುಟುಂಬದಸ್ಥರು ಅನ್ನದಾತನ ಅಂಗಳದಲ್ಲಿ ಸಂಭ್ರಮದಲ್ಲಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

31/10/2020 03:50 pm

Cinque Terre

27.08 K

Cinque Terre

1

ಸಂಬಂಧಿತ ಸುದ್ದಿ