ವರದಿ:ಮಲ್ಲಿಕಾರ್ಜುನ ಪುರದನಗೌಡರ
ಕಲಘಟಗಿ:ತಾಲೂಕಿನಲ್ಲಿ ಪ್ರಸಕ್ತ ಮುಂಗಾರು ಮಳೆ ಭತ್ತದ ಬೆಳೆಗೆ ಅನಕೂಲಕರವಾಗಿದ್ದು,ಭತ್ತದ ಬೆಳೆಗೆ ಮರು ಜೀವ ನೀಡಿದೆ ಎಂದರೆ ತಪ್ಪಾಗಲಾರದು.
ಭತ್ತದ ಕಣಜ ಖ್ಯಾತಿಯ ಕಲಘಟಗಿ ತಾಲೂಕಿನಲ್ಲಿ ಪ್ರಸಕ್ತ ವರ್ಷ ಒಟ್ಟು ಐದು ಸಾವಿರ ಹೆಕ್ಟೇರ್ ಭತ್ತದ ಬಿತ್ತನೆಯಾಗಿದ್ದು,ಈಗ ಭತ್ತದ ಬೆಳೆ ಹೊಡೆ ಹಾಕುವ ಹಂತದಲ್ಲಿ ಇದ್ದು,ಉತ್ತಮ ಇಳುವರಿಯ ನಿರೀಕ್ಷೆಯಲ್ಲಿ ಭತ್ತ ಬಿತ್ತನೆ ಮಾಡಿರುವ ರೈತರಿದ್ದಾರೆ.
ಕಳೆದ ಎರಡು ವರ್ಷಗಳಿಂದ ಅಧಿಕ ಮಳೆ ಸುರಿಯುತ್ತಿದ್ದು ಭತ್ತದ ಬೆಳೆಗೆ ಅನುಕೂಲಕರವಾದ ವಾತಾವರಣ ನಿರ್ಮಿಸಿದೆ.
ಭತ್ತದ ಕಣಜ ಖ್ಯಾತಿಯ ಕಲಘಟಗಿ ಭಾಗದಲ್ಲಿ ಇತ್ತಿತ್ತಲಾಗಿ ಮಳೆ ಕಡಿಮೆಯಾಗಿ ಭತ್ತದ ಬಿತ್ತನೆಯೂ ಕಡಿಮೆಯಾಗಿತ್ತು,ಪ್ರಸಕ್ತ ಸಾಲಿನ ಮುಂಗಾರಿನ ಮಳೆ ಭತ್ತದ ಬೆಳೆಗೆ ಪೂರಕವಾಗಿದ್ದು,ಭತ್ತದ ಬೆಳೆಗೆ ಮರು ಜೀವ ನೀಡಿದಂತಾಗಿದೆ.
Kshetra Samachara
21/09/2020 12:42 pm