ಕಲಘಟಗಿ:ತಾಲೂಕಿನಲ್ಲಿ ಅತಿವೃಷ್ಠಿಗೆ ಗೋವಿನ ಜೋಳ ಹಾಗೂ ಸೋಯಾ ಬೆಳೆ ಸಂಪೂರ್ಣ ಹಾಳಾಗಿದ್ದು ರೈತರು ಪರಿಹಾರಕ್ಕೆ ಸರಕಾರದತ್ತ ಮುಖ ಮಾಡುವಂತಾಗಿದೆ.
ಪ್ರಸಕ್ತ ಮುಂಗಾರು ರೈತರಿಗೆ ಶಾಪವಾಗಿ ಪರಿಣಮಿಸಿದ್ದು, ಸೋಯಾ ಸಂಪೂರ್ಣ ಕೊಳೆತು ನಾಶವಾಗಿದ್ದರೆ,ಗೋವಿನ ಜೋಳದ ಬೆಳೆಯು ಹಾಳಾಗುತ್ತಿದೆ.
ಈಗ ನಷ್ಟ ಅನುಭವಿಸಿರುವ ರೈತರು ಬೆಳೆ ಹಾನಿ ಪರಿಹಾರಕ್ಕಾಗಿ ಸರಕಾರದತ್ತ ಮುಖ ಮಾಡುವಂತಾಗಿರುವುದು ವಿಪರ್ಯಾಸ.
ಸೋಯಾಬಿನ ಬೆಳೆ ಮತ್ತು ಗೋವಿನ ಜೋಳ ಬೆಳೆ ಮತ್ತು ರಭಸವಾಗಿ ಗಾಳಿ ಬೀಸುತ್ತಿರುವುದರಿಂದ ಭತ್ತದ ಬೆಳೆಗೂ ಅಲ್ಪಸ್ವಲ್ಪ ಹಾನಿಯಾಗಿದ್ದು ಕೂಡಲೇ ಸರಕಾರ ಬೆಳೆ ಹಾನಿಗೆ ಪರಿಹಾರ ಕೊಡಬೇಕೆಂದು ರೈತ ನಾಗಲಿಂಗಯ್ಯ ಹಿರೇಮಠ ಪಬ್ಲಿಕ್ ನೆಕ್ಸ್ಟ್ ಮೂಲಕ ಒತ್ತಾಯಿಸಿದ್ದಾರೆ.
ಅತಿವೃಷ್ಠಿಯ ತಾಲೂಕುಗಳಲ್ಲಿ ಬೆಳೆ ಹಾನಿಯಾಗಿದ್ದು,ಸರಕಾರ ರೈತರ ನೆರವಿಗೆ ಧಾವಿಸುವುದೆ ಎಂಬುದನ್ನು ಕಾದುನೋಡ ಬೇಕಿದೆ.
Kshetra Samachara
26/09/2020 06:40 pm