ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ಧರಣಿ ಪ್ರತಿಭಟನೆ ನಡೆಸಿದ ರೈತರು

ನವಲಗುಂದ : ಕೃಷಿ ಕಾಯ್ದೆ ವಿರೋಧಿಸಿ ಭಾರತ್ ಬಂದ್ ಕರೆಗೆ ಕರ್ನಾಟಕ ರಾಜ್ಯ ಜಾತ್ಯಾತೀತ- ಪಕ್ಷಾತೀತ ಮಹಾದಾಯಿ ಕಳಸಾ - ಬಂಡೂರಿ ರೈತ , ಅಸಂಘಟಿತ ಕಾರ್ಮಿಕರು, ಮಹಿಳೆಯರ ರೈತ ಹೋರಾಟ ಒಕ್ಕೂಟ ಕೇಂದ್ರ ಸಮಿತಿ ವತಿಯಿಂದ ಬಂದ್ ಗೆ ಸಂಪೂರ್ಣ ಬೆಂಬಲ ಇದೆ ಎಂದು ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಈ ವೇಳೆ ಸಂಪೂರ್ಣ ರಸ್ತೆ ಬಂದ್ ಮಾಡಿ ರಸ್ತೆ ಮೇಲೆ ಧರಣಿ ಪ್ರತಿಭಟನೆ ನಡೆಸಿದ ಅವರು, ಎ.ಪಿ.ಎಂ.ಸಿ ಕಾಯ್ದೆ ತಿದ್ದುಪಡಿಯನ್ನು ಸಂಪೂರ್ಣ ಕೈಬಿಡಬೇಕು, ಭೂಸುಧಾರಣಾ ಕಾಯ್ದೆ ತಿದ್ದುಪಡಿ ಕಾಯದೆ ವಾಪಸ್ ಪಡೆಯಬೇಕು, ಕೆ.ಇ.ಬಿ ಖಾಸಗೀಕರಣ ಬಗ್ಗೆ ಕೈಬಿಡಬೇಕು ಎಂಬ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಪ್ರತಿಭಟಿಸಿದರು. ಇನ್ನೂ ಈ ವೇಳೆ ರೈತ ಮುಖಂಡ ಲೋಕನಾಥ ಹೆಬಸೂರು, ಪುರಸಭೆ ಅಧ್ಯಕ್ಷ ಮಂಜುನಾಥ್ ಜಾದವ್,ಡಿ ಜಿ ಹೆಬಸೂರು, ಆರ್ ಎಂ ನಾಯ್ಕರ್, ಶಾಲ್ವಾಡಿ, ಮಲ್ಲಯ್ಯ ಪೂಜಾರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

Edited By : Manjunath H D
Kshetra Samachara

Kshetra Samachara

08/12/2020 03:02 pm

Cinque Terre

14.39 K

Cinque Terre

0

ಸಂಬಂಧಿತ ಸುದ್ದಿ