ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳದಲ್ಲಿ ಬಂದ್ ಮಿಶ್ರ ಪ್ರತಿಕ್ರಿಯೆ ಸಂಚಾರಕ್ಕೆ ಯೆಸ್ ವಹಿವಾಟು ಡಲ್

ಕುಂದಗೋಳ : ಎಪಿಎಂಸಿ ಕಾಯ್ದೆ ಹಾಗೂ ಭೂ ಸುಧಾರಣಾ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ಭಾರತ ಬಂದ್ ಕುಂದಗೋಳ ಪಟ್ಟಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕುಂದಗೋಳ ಪಟ್ಟಣದ ಬಸ್ ನಿಲ್ದಾಣದಲ್ಲಿ ಕೇವಲ ಬೆರಳೆಣಿಕೆಯಷ್ಟು ಜನ ಕಂಡು ಬರುತ್ತಿದ್ದು, ಗಂಟೆ ಅರ್ಧ ಗಂಟೆಗೊಂದು ಬಸ್ ಆಗಮಿಸುತ್ತಿವೆ. ಇನ್ನು ಅಂಗಡಿ ಮುಂಗಟ್ಟುಗಳು ತೆರೆದೆ ಇದ್ದರು ಗ್ರಾಹಕರ ಆಗಮನವೇ ಇಲ್ಲವಾಗಿದೆ. ಬೀದಿಗಳಲ್ಲಿ ಎಂದಿನಂತೆ ಸಂಚಾರ ಇಂದು ಸಹ ಕಂಡು ಬರುತ್ತಿದ್ದು, ಕುಂದಗೋಳ ಪಟ್ಟಣದ ಎಲ್ಲೇಡೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಬ್ಯಾಂಕ್ ಆಗಮಿಸುವ ಜನರು ಬಂದ್ ಎಂಬ ವಿಚಾರ ಕೇಳಿ ಇಂದು ಕುಂದಗೋಳದ ವಾಲಿರದ ಕಾರಣ ಬ್ಯಾಂಕ್ ಮುಂದಿನ ಸರದಿ ಸಾಲು ಮಾಯವಾಗಿ ಬಿಕೋ ಎನ್ನುತ್ತಿವೆ.

ಕುಂದಗೋಳ ಪಟ್ಟಣದ ರೈತ ಸಂಘಟನೆಗಳು ಹಾಗೂ ಕಿಸಾನ್ ಕಾಂಗ್ರೆಸ್ ಘಟಕದವರು ಬಂದ್ ಘೋಷಣೆ ಮಾಡಿದ್ದು, ಪ್ರತಿಭಟನೆ ಆರಂಭಿಸುವ ಮುನ್ಸೂಚನೆ ನೀಡಿದ್ದಾರೆ.

Edited By : Manjunath H D
Kshetra Samachara

Kshetra Samachara

08/12/2020 11:31 am

Cinque Terre

16.95 K

Cinque Terre

0

ಸಂಬಂಧಿತ ಸುದ್ದಿ