ಅಣ್ಣಿಗೇರಿ : ಸ್ಥಳೀಯ ಎಪಿಎಂಸಿ ಪ್ರಾಂಗಣದಲ್ಲಿ ಭಾರತೀಯ ಹತ್ತಿ ನಿಗಮದ ವತಿಯಿಂದ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಸರ್ಕಾರ ಹತ್ತಿ ಖರೀದಿ ಮಾಡುತ್ತಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತಯೆ ರೈತರು ತಾವು ಬೆಳೆದ ಹತ್ತಿಯನ್ನು ಟ್ಯಾಕ್ಟರಗಳಲ್ಲಿ ತುಂಬಿಕೊಂಡು ಬಂದು ಎಪಿಎಂಸಿ ಮುಂಭಾಗದಲ್ಲಿ ನಿಂತಿರುವ ದೃಶ್ಯ ಮಂಗಳವಾರ ಮುಂಜಾನೆ ನೋಡುಗರ ಕಣ್ಣಿಗೆ ಆಕರ್ಷಣೆ ಆಗಿತ್ತು.
ನಿನ್ನೆಯವರೆಗೂ ಖಾಸಗಿ ವ್ಯಾಪಾರಕ್ಕೆ ಮೊರೆ ಹೋಗಿದ್ದ ರೈತರು ಸೋಮವಾರ ಸಂಜೆಯಿಂದ ಸರ್ಕಾರದ ಮೊರೆ ಹೋಗಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಸರ್ಕಾರ ಹತ್ತಿಯನ್ನು ರೈತರಿಂದ ನೇರವಾಗಿ ಹೆಚ್ಚಿನ ಬೆಲೆಯಲ್ಲಿ ಖರೀದಿ ಮಾಡಿ ರೈತ ಕುಲಕ್ಕೆ ಅನುಕೂಲ ಮಾಡುತ್ತಿದೆ ಎಂದು ಸರದಿಯಲ್ಲಿ ನಿಂತ ರೈತರು ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದರು.
Kshetra Samachara
24/11/2020 06:10 pm