ಕಲಘಟಗಿ : ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯ ಆವರಣದಲ್ಲಿರುವ ತೂಕದ (ವ್ಹೆಬ್ರಿಜ್) ಯಂತ್ರ ಕಳೆದ ಒಂದು ವರ್ಷದಿಂದ ಹಾಳಾಗಿದೆ.
60 ಎಂ ಟಿ ತೂಕದ (ವ್ಹೆಬ್ರಿಜ್) ಯಂತ್ರ ಕೆಟ್ಟ ಪರಿಣಾಮ ರೈತರು ಹಾಗೂ ವ್ಯಾಪಾರಿಗಳು ಬೆಳೆ ಹಾಗೂ ದವಸ ಧಾನ್ಯಗಳನ್ನು ತೂಕಮಾಡಲು ಹುಬ್ಬಳ್ಳಿ,ಧಾರವಾಡಲ್ಲಿದುಬಾರಿ ಬೆಲೆಯ ನ್ನು ನೀಡಿ ಖಾಸಗಿ ವ್ಹೆಬ್ರಿಜ್ ಅವಲಂಬಿಸುವಂತಾಗಿದೆ.
ಈಗ ಸೋಯಾ, ಗೋವಿನ ಜೋಳ ಮಾರಾಟ ಪ್ರಾರಂಭವಾಗಿದ್ದು ಎಪಿಎಂಸಿ ಅಧಿಕಾರಿಗಳು ಹಾಳಾದ ವ್ಹೆಬ್ರಿಜ್ ಸರಿಪಡಿಸಿ ರೈತರ ಹಿತ ಕಾಪಾಡ ಬೇಕಿದೆ.
Kshetra Samachara
13/11/2020 03:58 pm