ಕಲಘಟಗಿ:ತಾಲೂಕಿನಲ್ಲಿ ಕಬ್ಬು ಕಟಾವು ಮಾಡಿಸಲಾಗುತ್ತಿದ್ದು,ದೀಪಾವಳಿ ಹಬ್ಬಕ್ಕೂ ಮುನ್ನವೇ ಹಳಿಯಾಳ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಣೆ ಮಾಡಲಾಗುತ್ತಿದೆ.
ತಾಲೂಕಿನಲ್ಲಿನ ಬೆಳೆದ ಕಬ್ಬುನ್ನು ರೈತರು ಈಗಾಗಲೇ ಕಟಾವು ಮಾಡಿಸುತ್ತಿದ್ದು,ಕಟಾವಾದ ಕಬ್ಬನ್ನು ಹಳಿಯಾಳದ ಪ್ಯಾರಿ ಶುಗರ್ಸ್ ಕಾರ್ಖಾನೆಗೆ ಮಾರಾಟ ಮಾಡುತ್ತಿದ್ದಾರೆ.
ಕಲಘಟಗಿಯಿಂದ ಹಳಿಯಾಳಕ್ಕೆ ಕಬ್ಬು ಸಾಗಾಟ ಬಲು ಜೋರಾಗಿ ನಡೆದಿದ್ದು, ಹಳಿಯಾಳ ರಸ್ತೆಯಲ್ಲಿ ಕಬ್ಬು ಸಾಗಿಸುವ ಲಾರಿಗಳು ಹಾಗೂ ಟ್ರ್ಯಾಕ್ಟರಗಳ ಸಂಚಾರ ಹೆಚ್ಚಾಗಿದೆ.
Kshetra Samachara
10/11/2020 01:15 pm