", "articleSection": "Agriculture", "image": { "@type": "ImageObject", "url": "https://prod.cdn.publicnext.com/s3fs-public/286525-1738665520-WhatsApp-Image-2025-02-04-at-4.03.18-PM-(1).jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Mallesh Suranagi" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ಹಲ್ಲಿದ್ದಾಗ ಕಡಲೆ ಇಲ್ಲ, ಕಡಲೆ ಇದ್ದಾಗ ಹಲ್ಲಿಲ್ಲ ಎನ್ನುವಂತಾಗಿದೆ ಕಡಲೆ ಬೆಳೆದ ರೈತರ ಸ್ಥಿತಿ. ಈ ವರ್ಷ ಹಿಂಗಾರು ಉತ್ತಮ ಬೆಳೆ ಬಂ...Read more" } ", "keywords": "Hubballi, Kadale Bele, Farmer Distress, Crop Crisis, Market Failure, Procurement Center, Karnataka Farmers, Agricultural Crisis, Groundnut Crop, Farming Issues, Rural Distress.,Hubballi-Dharwad,Agriculture", "url": "https://publicnext.com/article/nid/Hubballi-Dharwad/Agriculture" }
ಹುಬ್ಬಳ್ಳಿ: ಹಲ್ಲಿದ್ದಾಗ ಕಡಲೆ ಇಲ್ಲ, ಕಡಲೆ ಇದ್ದಾಗ ಹಲ್ಲಿಲ್ಲ ಎನ್ನುವಂತಾಗಿದೆ ಕಡಲೆ ಬೆಳೆದ ರೈತರ ಸ್ಥಿತಿ. ಈ ವರ್ಷ ಹಿಂಗಾರು ಉತ್ತಮ ಬೆಳೆ ಬಂದಿದೆ. ಆದ್ರೆ ಸರ್ಕಾರ ಕಡಲೆ ಖರೀದಿ ಕೇಂದ್ರ ಇನ್ನೂ ಆರಂಭ ಮಾಡದೆ ಇರೋದು ರೈತರ ಸಂಕಷ್ಟಕ್ಕೆ ಕಾರಣವಾಗಿದೆ.
ಕಳೆದೆ ನಾಲ್ಕೈದು ವರ್ಷಗಳಿಂದ ಧಾರವಾಡ ಜಿಲ್ಲೆಯಲ್ಲಿ ಕಡಲೆ ಬೆಳೆದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ನಿರಂತರವಾಗಿ ಅತಿವೃಷ್ಠಿ ಮತ್ತು ಅನಾವೃಷ್ಠಿಯಿದ ಕಡಲೆ ಬೆಳೆ ರೈತನ ಕೈಗೆ ಸಿಕ್ಕಿರಲಿಲ್ಲ. ಅದರಲ್ಲಿಯೇ ಅಳೆದುಳಿದ ಬೆಳೆಯನ್ನ ಮಾರಾಟ ಮಾಡಿದರು. ಹಲವು ರೈತರು ಇನ್ನು ಮುಂದೆ ಕಡಲೆ ಬೆಳೆಯುವುದೆ ಬೇಡ ಅಂತಾ ಪರ್ಯಾಯ ಬೆಳೆ ಮೊರೆ ಹೋಗಿದ್ರು. ಆದ್ರೆ ಈ ವರ್ಷ ಧಾರವಾಡ ಜಿಲ್ಲೆಯಲ್ಲಿ ಉತ್ತಮ ಹಿಂಗಾರು ಮಳೆಯಾಗಿದ್ದು ಕಡಲೆ ಬೆಳೆದ ರೈತರಿಗೆ ವರದಾನವಾಗಿದೆ. ಬೆಳೆ ಕಟಾವು ಮಾಡುವು ಸಂದರ್ಭದಲ್ಲಿ ಮಳೆ ಏನೂ ಇಲ್ಲದ ಕಾರಣ ಬೆಳೆ ಹಾನಿಯಾಗಿಲ್ಲ. ಹೀಗಾಗಿ ಸಾಕಷ್ಟು ಪ್ರಮಾಣದ ಕಡಲೆ ಬೆಳೆ ಬಂದಿದೆ. ಆದ್ರೆ ಇದನ್ನ ಮಾರಾಟ ಮಾಡಲು ರೈತರಿಗೆ ಸಾಧ್ಯವಾಗುತ್ತಿಲ್ಲ. ರೈತರ ಬಳಿ ಬೆಳೆ ಇದ್ದರೂ ಈಗ ಮಾರಲಾಗದ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಇದುವರೆಗೆ ಧಾರವಾಡ ಜಿಲ್ಲೆಯಲ್ಲಿ ಕಡಲೆ ಖರೀದಿ ಕೇಂದ್ರ ಆರಂಭ ಮಾಡಿಲ್ಲ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಹೊಲದಲ್ಲಿ ಕಡಲೆ ರಾಶಿ ಹಾಕಿದ್ದು, ಒಂದಿಷ್ಟು ರೈತರು ಕಟಾವು ಮಾಡುತ್ತಿದ್ದಾರೆ. ಮತ್ತೆ ಈಗ ಏನಾದ್ರೂ ಅಪ್ಪಿ ತಪ್ಪಿ ಮಳೆ ಬಂದ್ರೆ ಬೆಳೆ ನೀರು ಪಾಲಾಗಲಿದೆ ಎನ್ನುವ ಆತಂಕ ರೈತರದ್ದು. 45 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬೆಳೆಯಲಾಗಿದ್ದು, ಪ್ರತಿ ಕ್ವಿಂಟಾಲ್‌ಗೆ 5650 ರೂಪಾಯಿ ಬೆಂಬಲ ಬೆಲೆಯಡಿಯಲ್ಲಿ ಸರಕಾರ ಖರೀದಿ ಮಾಡಬೇಕಿದೆ. ಆದ್ರೆ ಇದುವರೆಗೆ ಸರ್ಕಾರ ಮಾತ್ರ ಕಡಲೆ ಖರೀದಿ ಕೇಂದ್ರ ಆರಂಭಿಸಿಲ್ಲ. ಧಾರವಾಡ ಜಿಲ್ಲೆಯ ನವಲಗುಂದ, ಕುಂದಗೋಳ, ಹುಬ್ಬಳ್ಳಿ ಭಾಗದಲ್ಲಿ ಹೆಚ್ಚಾಗಿ ಕಡಲೆ ಬೆಳೆದಿದ್ದಾರೆ. ಆದ್ರೆ ಸರ್ಕಾರ ಮಾತ್ರ ಖರೀದಿ ಕೇಂದ್ರ ಮಾತ್ರ ಓಪನ್ ಮಾಡುತ್ತಿಲ್ಲ.
ಪ್ರತಿವರ್ಷ ಮಳೆಯಿಂದಾಗಿ ಕಡಲೆ ಬೆಳೆ ಹಾಳಾಗುತ್ತಿತ್ತು. ಅಳಿದುಳಿದ ಬೆಳೆಯನ್ನ ಕಡಿಮೆ ಬೆಲೆಗೆ ರೈತರು ಮಾರಾಟ ಮಾಡ್ತಿದ್ರು. ಆದ್ರೆ ಈ ವರ್ಷ ಉತ್ತಮ ಫಸಲು ಬಂದಿದ್ದು ಸರ್ಕಾರ ಸೂಕ್ತ ಸಮಯದಲ್ಲಿ ಖರೀದಿ ಕೇಂದ್ರ ಆರಂಭಿಸುವ ಮೂಲಕ ರೈತರ ನೆರವಿಗೆ ಬರಬೇಕಿದೆ.
ಮಲ್ಲೇಶ್ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
Kshetra Samachara
04/02/2025 04:08 pm