ಹುಬ್ಬಳ್ಳಿ: ಈ ಬಾರಿಯ ಸತತ ಮಳೆ ನಡುವೆಯೂ ವರುಣನ ಕಣ್ಣ ತಪ್ಪಿ ಉಳಿದ ಬೆಳೆಯನ್ನು ರೈತ ಮಾರುಕಟ್ಟೆಗೆ ತಂದಿದ್ದಾರೆ.
ವರ್ಷಕ್ಕಿಂತ ಈ ವರ್ಷದ ಬೆಳೆ ಆವುಕ ತೀರಾ ಕಡಿಮೆಯಾಗಿದೆ. ಇದರಿಂದಾಗಿ ಎಪಿಎಂಸಿ ಆವರಣ ಖಾಲಿ ಖಾಲಿಯಾಗಿದೆ.
ಸದ್ಯ ಹುಬ್ಬಳ್ಳಿಯ ಎಪಿಎಂಸಿಗೆ ಶೇಂಗಾ ಆವಕದಲ್ಲಿ ಏರಿಕೆಯಾಗಿದ್ದು, ದರವೂ ಚೇತರಿಸಿಕೊಂಡಿದೆ.
ಈ ವರ್ಷ ಧಾರವಾಡ ಜಿಲ್ಲೆಯಲ್ಲಿ 58,244 ಹೆಕ್ಟೇರ್ ಶೇಂಗಾ ಬಿತ್ತನೆ ಗುರಿ ಹೊಂದಲಾಗಿತ್ತು.
ಆದರೆ, ಗುರಿಗಿಂತ ಒಂದಿಷ್ಟು ಕಡಿಮೆಯಾಗಿದ್ದು, 51,367 ಹೆಕ್ಟೇರ್ ಬಿತ್ತನೆಯಾಗಿತ್ತು ಎಂದು ಕೃಷಿ ಇಲಾಖೆ ತಿಳಿಸಿದೆ.
ಫಸಲು ಕೈಗೆ ಬರುವ ಹೊತ್ತಿಗೆ ಸುರಿದ ಸತತ ಮಳೆ ಬಹುತೇಕ ಬೆಳೆಯನ್ನು ನೀರು ಪಾಲು ಮಾಡಿತ್ತು.
ಅದರ ಮಧ್ಯೆಯೂ ರೈತರು ಒಂದಿಷ್ಟು ಬೆಳೆ ಕಾಪಾಡಿಕೊಂಡು ಇದೀಗ ಮಾರುಕಟ್ಟೆಗೆ ಶೇಂಗಾ ತರುತ್ತಿದ್ದಾರೆ.
ಪ್ರತಿ ಕ್ವಿಂಟಾಲ್ ಗೆ ಸುಮಾರು 5 ಸಾವಿರ ರೂ. ವರೆಗೆ ಬೆಲೆ ಸಿಗುತ್ತಿದೆ.
ಬುಧವಾರದಂದು ನಡೆದ ಟೆಂಡರ್ ನಲ್ಲಿ ಶೇಂಗಾ (ಗೆಜ್ಜೆ) ಪ್ರತಿ ಕ್ವಿಂಟಾಲ್ ಗೆ ಕನಿಷ್ಠ 1669ರಿಂದ ಗರಿಷ್ಠ 5680 ರೂ.ವರೆಗೆ ಮಾರಾಟವಾಗಿದೆ.
Kshetra Samachara
29/10/2020 11:27 am