ಧಾರವಾಡ: ಪ್ರಸಕ್ತ ವರ್ಷದ ಮಳೆಯಿಂದಾಗಿ ಅಪಾರ ಪ್ರಮಾಣದ ಕಬ್ಬು ನೆಲಕಚ್ಚಿದೆ. ರೈತನಿಗೆ ಸಿಹಿ ನೀಡಬೇಕಿದ್ದ ಕಬ್ಬು ಕಹಿ ಉಣಿಸಿದೆ.
ನಿರಂತರ ಮಳೆಯಿಂದಾಗಿ, ದೊಡ್ಡ ಪ್ರಮಾಣದಲ್ಲಿ ಬೆಳೆದ ಕಬ್ಬು ನೆಲಕಚ್ಚಿದ್ದು, ರೈತ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತೆ ಮಾಡಿದೆ.
ಧಾರವಾಡ ಜಿಲ್ಲೆಯಾದ್ಯಂತ ಒಟ್ಟು 11,225 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದ್ದು, ಆ ಪೈಕಿ 356 ಹೆಕ್ಟೇರ್ ಪ್ರದೇಶದಲ್ಲಿನ ಕಬ್ಬು ಮಳೆ ಹಾಗೂ ಗಾಳಿಯಿಂದ ನೆಲಕಚ್ಚಿದೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಒಂದು ಟನ್ ಗೆ 2600 ರಿಂದ 2800 ರೂಪಾಯಿಯಂತೆ ಕಬ್ಬು ಮಾರಾಟವಾಗುತ್ತಿತ್ತು. ಆದರೆ, ಇದೀಗ ನೆಲಕಚ್ಚಿರುವ ಕಬ್ಬಿನಿಂದಾಗಿ ಖರ್ಚು ಮಾಡಿದಷ್ಟೂ ಆದಾಯ ಬರದಂತಾಗಿದೆ.
ಶೇ.33ಕ್ಕಿಂತ ಅಧಿಕ ಕಬ್ಬು ನಾಶ ಅನುಭವಿಸಿದ ರೈತರಿಗೆ ಎನ್ ಡಿಆರ್ ಎಫ್ ಹಾಗೂ ಎಸ್ ಡಿಆರ್ ಎಫ್ ಗೈಡ್ಲೈನ್ಸ್ ಪ್ರಕಾರ ಪರಿಹಾರ ಸಿಗುತ್ತದೆ. ನೀರಾವರಿ ಭೂಮಿಯಲ್ಲಿ ಬೆಳೆದ ಕಬ್ಬಿಗೆ ಪ್ರತಿ ಹೆಕ್ಟೇರ್ ಗೆ 13,600 ಹಾಗೂ ಒಣಬೇಸಾಯದಲ್ಲಿ ಬೆಳೆದ ಕಬ್ಬಿಗೆ 6800 ಪರಿಹಾರ ನೀಡಲಾಗುತ್ತದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದರು.
ಏನೇ ಆಗಲಿ, ಪ್ರಸಕ್ತ ವರ್ಷದ ಮಳೆಯಿಂದಾಗಿ ಅಪಾರ ಪ್ರಮಾಣದ ಕಬ್ಬು ನೆಲಕಚ್ಚಿದೆ. ಅಲ್ಲದೇ ಪ್ರಸಕ್ತ ವರ್ಷ ಕಬ್ಬಿಗೆ ಅಂದುಕೊಂಡಷ್ಟು ದರ ನಿಗದಿಯಾಗುತ್ತದೆಯೋ ಇಲ್ಲವೋ ಎಂಬ ಆತಂಕದಲ್ಲಿ ಕಬ್ಬು ಬೆಳೆಗಾರರಿದ್ದಾರೆ.
Kshetra Samachara
17/10/2020 10:16 pm