ಕಲಘಟಗಿ:ಲಿಂಪಿಸ್ಕಿನ್ ರೋಗ ಬಾಧೆಯಿಂದ ಬಳಲುತ್ತಿದ್ದ ದನಗಳಿಗೆ ಚಿಕಿತ್ಸೆ ನೀಡಿದ ಪರಿಣಾಮ ರೈತರ ಮೂರು ದನಗಳು ಅಸ್ವಸ್ಥಗೊಂಡ ಘಟನೆ ಮಂಗಳವಾರ ಜರುಗಿದೆ.ಕಲಘಟಗಿ ಪಟ್ಟಣದಲ್ಲಿನ ಪಶು ಆಸ್ಪತ್ರೆಯಿಂದ ಚಿಕಿತ್ಸೆ ನೀಡಿಸಿದ ರೈತರು ದನಗಳನ್ನು ಮರಳಿ ಕರೆದುಕೊಂಡು ಹೋಗುವಾಗ ಬಸ್ ನಿಲ್ದಾಣದ ಹತ್ತಿರ ಅಸ್ವಸ್ಥವಾಗಿದ್ದವು.
ಅಸ್ವಸ್ಥವಾದ ದನಗಳನ್ನು ವಾಹನದಲ್ಲಿ ಮತ್ತೆ ಪಶು ಆಸ್ಪತ್ರೆಗೆ ದಾಖಲಿಸಲಾಯಿತು.ಡಾ ಎಸ್ ವಿ ಸಂತಿ ಹಾಗೂ ಅವರ ಸಿಬ್ಬಂದಿ ಚಿಕಿತ್ಸೆಯನ್ನು ಒದಗಿಸಿದ ಎರಡು ಗಂಟೆಗಳ ನಂತರ ದನಗಳು ಸ್ವಲ್ಪ ಚೇತರಿಸಿಕೊಂಡಿವೆ.ಲಿಂಪಿಸ್ಕಿನ್ ಚಿಕಿತ್ಸೆ ಪಡೆದ ದನಗಳು ಅಸ್ವಸ್ಥಗೊಂಡಿರುವುದಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
Kshetra Samachara
14/10/2020 10:25 am